ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ ೯೫ ನೇ ಅಕಾಡೆಮಿ ಪ್ರಶಸ್ತಿಗಳನ್ನು ವೀಕ್ಷಿಸಲು ಸೋಮವಾರ ಮುಂಜಾನೆಯೇ ಉತ್ಸಾಹದಿಂದ ಎದ್ದ ಭಾರತದ ಜನರು ಎರಡು ಗೆಲುವುಗಳಿಗೆ ಜೈಕಾರ ಹೇಳಿದರು. ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಅವರ ತಮಿಳು ಸಾಕ್ಷ್ಯಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ನಿರ್ಮಾಣವಾಗಿದೆ. ನಿರ್ದೇಶಕ ಎಸ್. ಎಸ್. ರಾಜಮೌಳಿ ಅವರ ತೆಲುಗು ಚಲನಚಿತ್ರ ‘ಆರ್. ಆರ್. ಆರ್’ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಫೀಚರ್ ಚಲನಚಿತ್ರ ನಿರ್ಮಾಣ. ಆರ್. ಆರ್. ಆರ್ ಚಿತ್ರದ ಆಕರ್ಷಕ ‘ನಾಟು ನಾಟು’ ಅತ್ಯುತ್ತಮ ಗೀತೆಗಾಗಿ (ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಮತ್ತು ಗೀತರಚನೆಕಾರ ಚಂದ್ರಬೋಸ್) ಪ್ರಶಸ್ತಿ ಗೆದ್ದಿತು. ಆದರೆ ಈ ಹರ್ಷೋದ್ಗಾರದ ನಡುವೆ, ನಿರ್ದೇಶಕ ಶೌನಕ್ ಸೇನ್ ಅವರ ‘ಆಲ್ ದಟ್ ಬ್ರೀತ್ಸ್’ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿಯನ್ನು ನಿರ್ದೇಶಕ ಡೇನಿಯಲ್ ರೋಹರ್ ಅವರ ‘ನವಲ್ನಿ’ಗೆ ಕಳೆದುಕೊಂಡಿತು. ಕಳೆದ ಬಾರಿ ಭಾರತವು ಆಸ್ಕರ್ ಪ್ರಶಸ್ತಿ ಗೆದ್ದಿದ್ದು ೨೦೦೯ರಲ್ಲಿ. ಬ್ರಿಟಿಷ್ ನಿರ್ಮಾಣದ ‘ಸ್ಲಮ್‌ಡಾಗ್ ಮಿಲಿಯನೇರ್’ ಚಿತ್ರದ ‘ಜೈ ಹೊ’ ಹಾಡಿಗೆ ಎ.ಆರ್. ರಹಮಾನ್ ಮತ್ತು ಗೀತಾ ರಚನೆಕಾರ ಗುಲ್ಜಾರ್ ಅವರಿಗೆ ಮತ್ತು ಅತ್ಯುತ್ತಮ ಧ್ವನಿ ಮಿಶ್ರಣಕ್ಕಾಗಿ ರೆಸುಲ್ ಪೂಕುಟ್ಟಿ ಅವರಿಗೆ ಪ್ರಶಸ್ತಿ ಲಭಿಸಿತು. ಈ ಡ್ಯಾನಿ ಬೋಯ್ಲ್ ಚಲನಚಿತ್ರವನ್ನು ಭಾರತೀಯ ಸಿನಿಮಾದ ಹಾಡು, ನೃತ್ಯ ಮತ್ತು ಮುಖ್ಯವಾಹಿನಿಯ ಮಸಾಲಾಗಳ ಪಾಶ್ಚಿಮಾತ್ಯ ಪ್ರಪಂಚದ ವ್ಯಾಖ್ಯಾನ ಎಂದು ವಿವರಿಸಬಹುದು. ಆದರೆ ಆರ್. ಆರ್. ಆರ್ ಭಾರತೀಯ ಮುಖ್ಯವಾಹಿನಿಯ ನಿರ್ಮಾಣವಾಗಿದ್ದು ಅದರ ಚಮತ್ಕಾರದ ಆಕ್ಷನ್ ಮತ್ತು ನೃತ್ಯ ತುಣುಕುಗಳ ಬಗ್ಗೆ ಅದಕ್ಕೆ ಯಾವುದೇ ಮುಜುಗರ ಇಲ್ಲ. ‘ನಾಟು ನಾಟು’ ಗೆಲುವನ್ನು ಬಹುಸಂಸ್ಕೃತೀಯ ಅಮೇರಿಕನ್ ಸಮಾಜದ ಕಲ್ಪನೆಯನ್ನು ಸೆರೆಹಿಡಿದ ಸಿನೆಮಾಕ್ಕೆ ಅಕಾಡೆಮಿಯ ಮಾನ್ಯತೆ ಎಂದು ನೋಡಬಹುದು.
ಮತ್ತೊಮ್ಮೆ ಆಸ್ಕರ್ ಪ್ರಶಸ್ತಿಗಳಲ್ಲಿ ಬಿಳಿಯರದೆ ಮೇಲುಗೈ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ವಿಶೇಷವಾಗಿ ‘ದಿ ವುಮನ್ ಕಿಂಗ್’ ಗಾಗಿ ವಿಯೋಲಾ ಡೇವಿಸ್ ಮತ್ತು ‘ಟಿಲ್’ಗಾಗಿ ಡೇನಿಯಲ್ ಡೆಡ್‌ವೈಲರ್ ಅವರನ್ನು ಕಡೆಗಣಿಸಿ ‘ಟು ಲೆಸ್ಲಿ’ಗಾಗಿ ಅತ್ಯುತ್ತಮ ನಟಿ ವಿಭಾಗದಲ್ಲಿ ಆಂಡ್ರಿಯಾ ರೈಸ್‌ಬರೋ ಅವರ ಹೆಸರು ನಾಮನಿರ್ದೇಶನಗೊಂಡಿದ್ದು ತನ್ನ ಹಾಲಿವುಡ್ ಮಿತ್ರರ ಆಕ್ರಮಣಕಾರಿ ಪ್ರಚಾರದ ಕಾರಣದಿಂದಲೇ ಎಂಬುದರ ಬಗ್ಗೆ ಅಕಾಡೆಮಿ ತನಿಖೆ ನಡೆಸಬೇಕಾಯಿತು. ವಲಸಿಗ ಚೀನೀ ಕುಟುಂಬದ ಕಥೆಯಾದ ‘ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್’ ಒಟ್ಟು ೧೧ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡು ಏಳು ಪ್ರಶಸ್ತಿಗಳನ್ನು ಗೆದ್ದಿರುವುದು ಈ ಬಾರಿಯ ಆಸ್ಕರ್ ಪ್ರಶಸ್ತಿಗಳ ಒಳಗೊಳ್ಳುವಿಕೆಯ ಬೆಳ್ಳಿರೇಖೆ. ಈ ಚಿತ್ರವೂ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗಳನ್ನು ಗೆದ್ದ ಚಿತ್ರಕ್ಕೆ ವಿಯೆಟ್ನಾಮೀಸ್-ಅಮೆರಿಕನ್ ಕೆ ಹುಯ್ ಕ್ವಾನ್ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಬಂತು. ಚಿತ್ರದ ಪ್ರಮುಖ ನಟಿ ಮಿಚೆಲ್ ಯೋಹ್ ಅವರು ನಾಮನಿರ್ದೇಶನಗೊಂಡ ಮತ್ತು ಅತ್ಯುತ್ತಮ ನಟಿ ವಿಭಾಗದಲ್ಲಿ ಗೆದ್ದ ಮೊದಲ ಏಷ್ಯನ್ ಮಹಿಳೆಯಾಗಿದ್ದಾರೆ. ಕಳೆದ ೨೦ ವರ್ಷಗಳಲ್ಲಿ ಮೊದಲ ಬಾರಿಗೆ ಬಿಳಿಯೇತರ ನಟಿಗೆ ದೊರೆತ ಮೊದಲ ಅತ್ಯುತ್ತಮ ನಟಿ ಪ್ರಶಸ್ತಿಯಾಗಿದೆ. ಅರವತ್ತು ವರ್ಷ ವಯಸ್ಸಿನ ಮಿಚೆಲ್ ಯೋಹ್ ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾ ಯಾರಿಗೂ ನಿಮ್ಮ ಜೀವನದ ಉತ್ತಮ ಭಾಗ ಮುಗಿದಿದೆ ಎಂದು ತೀರ್ಮಾನಿಸಲು ಅವಕಾಶ ನೀಡಬೇಡಿ ಎಂದು ಒತ್ತಾಯಿಸಿದರು. ಇದಲ್ಲದೆ ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ಪ್ರಶಸ್ತಿ ಗೆದ್ದ ‘ಬ್ಲ್ಯಾಕ್ ಪ್ಯಾಂಥರ್: ವಖಾಂಡ ಫಾರೆವರ್’ ಚಿತ್ರವು ಏಕೈಕ ಬಿಳಿಯೇತರ ಚಿತ್ರವಾಗಿದೆ. ಮುಂಬರುವ ವರ್ಷಗಳಲ್ಲಿ ಈ ಬಹುಸಾಂಸ್ಕೃತಿಕ ಗೆಲುವುಗಳು ಹೆಚ್ಚಿನ ಕಲಾವಿದರನ್ನು ಜಾಗತಿಕ ಹಂತಕ್ಕೆ ಬೆಳೆಯಲು ದಾರಿ ಮಾಡಿಕೊಡಬೇಕು.
This editorial has been translated from English, which can be read here.
COMMents
SHARE