ಕಳೆದ ಭಾನುವಾರ ೨೦೦೨ ಮತ್ತು ೨೦೦೬ರ ಚಾಂಪಿಯನ್ ಆಗಿದ್ದ ಜರ್ಮನಿಯು ತನ್ನ ಮೂರನೇ ಪುರುಷರ ಹಾಕಿ ವಿಶ್ವಕಪ್ ಅನ್ನು ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಗೆದ್ದಾಗ ಜರ್ಮನಿ ಮತ್ತು ಭುವನೇಶ್ವರದ ಸಂಬಂಧ ಇನ್ನಷ್ಟು ಗಾಢವಾಯಿತು. ಜರ್ಮನಿಯು ತನ್ನ ಕೊನೆಯ ಪ್ರಮುಖ ಪ್ರಶಸ್ತಿಯಾದ ೨೦೧೪ರ ಚಾಂಪಿಯನ್ಸ್ ಟ್ರೋಫಿಯನ್ನು ಒಡಿಶಾದ ರಾಜಧಾನಿಯಲ್ಲಿ ಗೆದ್ದಿತು. ಈ ನಗರದ ಆಧುನಿಕ ಭಾಗವನ್ನು ಜರ್ಮನಿಯ ಆರ್ಕಿಟೆಕ್ಟ್ ಒಟ್ಟೊ ಕೊನಿಗ್ಸ್‌ಬರ್ಗರ್ ೧೯೪೬ರಲ್ಲಿ ವಿನ್ಯಾಸಗೊಳಿಸಿದ್ದರು. ಜರ್ಮನ್ ಪುರುಷ ಹಾಕಿ ತಂಡವು ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ಸ್‌ನ ಮೂರು ಕಿರೀಟಗಳ ದಾಖಲೆಯನ್ನು ಸರಿಗಟ್ಟಿದ್ದು ಪಾಕಿಸ್ತಾನದ ನಾಲ್ಕರ ದಾಖಲೆಗೆ ಒಂದು ಹಿಂದೆ ಉಳಿದಿದೆ. ಯುರೋ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್ ಅಪ್ ಆಗುವ ಮೂಲಕ ವಿಶ್ವಕಪ್‌ಗೆ ಅರ್ಹತೆ ಪಡೆದಿದ್ದ ಜರ್ಮನಿ, ೨೦೨೧ರಲ್ಲಿ ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕದ ಪಂದ್ಯದಲ್ಲಿ ಭಾರತದ ವಿರುದ್ಧ ಸೋತಿದ್ದು ಈ ಬಾರಿ ಗೆಲ್ಲುವ ನಿರೀಕ್ಷೆ ಇದ್ದ ನೆಚ್ಚಿನ ತಂಡವೇನೂ ಆಗಿರಲಿಲ್ಲ. ಜರ್ಮನಿಯು ನಿರೀಕ್ಷಿತವಲ್ಲದ ಈ ಗೆಲುವನ್ನು - ಕ್ವಾರ್ಟರ್‌ಫೈನಲ್‌ನಲ್ಲಿ ಇಂಗ್ಲೆಂಡ್, ಸೆಮಿಫೈನಲ್‌ನಲ್ಲಿ ಪ್ರಬಲ ಆಸ್ಟ್ರೇಲಿಯಾ ಮತ್ತು ಫೈನಲ್‌ನಲ್ಲಿ ೨೦೧೮ರ ಚಾಂಪಿಯನ್ ಬೆಲ್ಜಿಯಂ ವಿರುದ್ಧ - ದಾಖಲಿಸಲು ತನ್ನ ಅಂತಸ್ಥರ್ಯ ಮತ್ತು ಪುಟಿದೇಳುವ ಶಕ್ತಿಯನ್ನು ಅವಲಂಬಿಸಿತು. ಇವುಗಳಲ್ಲಿ ಎರಡು ಗೆಲುವುಗಳು, ಸಮ್ಮಿಟ್ ಮಟ್ಟದ ಒಂದು ಪಂದ್ಯವನ್ನೂ ಸೇರಿ, ಪೆನಾಲ್ಟಿ ಶೂಟೌಟುಗಳ ಮೂಲಕ ಬಂದವು. ೨೦೧೪ರ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡದಿಂದ ‘ಫೈನಲ್ನ ಆಟಗಾರ’ ಮತ್ತು ‘ಅತ್ಯುತ್ತಮ ಆಟಗಾರ’ ಮತ್ತು ‘ಬೆಸ್ಟ್ ಫಾರ್ವರ್ಡ್’ ಪ್ರಶಸ್ತಿ ವಿಜೇತ ನಿಕ್ಲಾಸ್ ವೆಲ್ಲೆನ್ ಸೇರಿದಂತೆ ಭರವಸೆ ಮತ್ತು ಅನುಭವದ ಸಮ ಮಿಶ್ರಣದಂತಿರುವ ಏಳು ಆಟಗಾರರ ತಂಡವು ಒಂದು ಸಂಘಟಿತ ಘಟಕವಾಗಿ ಕಾಣಿಸುತ್ತದೆ. ೨೦೧೮ ರಲ್ಲಿ ಅರ್ಜೆಂಟೀನಾ ಪರ ಆಡಿದ ಡ್ರ್ಯಾಗ್-ಫ್ಲಿಕ್ಕರ್ ಗೊಂಜಾಲೊ ಪೆಯಿಲಾಟ್ ಜರ್ಮನ್ ಬಣ್ಣಗಳಲ್ಲಿ ಪ್ರಮುಖ ಗೋಲುಗಳನ್ನು ಗಳಿಸುವ ಮೂಲಕ ಗಮನಾರ್ಹ ಕೊಡುಗೆ ನೀಡಿದರು.
ಬೆಲ್ಜಿಯಂಗೆ ತನ್ನ ಚಾಂಪಿಯನ್ ಟ್ಯಾಗ್ ಅನ್ನು ಉಳಿಸಿಕೊಳ್ಳುವ ಕನಸು ಭಗ್ನಗೊಂಡರೆ, 1998 ರ ನಂತರ ಬರಿಗೈಯಲ್ಲಿ ಹಿಂದಿರುಗಿದ ಆಸ್ಟ್ರೇಲಿಯಾದ ನಾಲ್ಕನೇ ಬಾರಿ ಚಿನ್ನ ಗೆದ್ದು ದಾಖಲೆ ಸರಿಗಟ್ಟುವ ಗುರಿಯಲ್ಲಿ ಹಿನ್ನಡೆ ಅನುಭವಿಸಿತು. ನೆದರ್ಲ್ಯಾಂಡ್ಸ್ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು. ಯುರೋಪಿಯನ್ ರಾಷ್ಟ್ರಗಳ ಪ್ರಾಬಲ್ಯವು ಮುಂದುವರೆಯಿತಾದರೂ, ಏಷಿಯನ್ ದೇಶಗಳು ನಿರಾಶೆ ಮೂಡಿಸಿದವು. ಏಷ್ಯಾದ ಅತ್ಯುತ್ತಮ ತಂಡವೆನಿಸಿದ ದಕ್ಷಿಣ ಕೊರಿಯಾ ಒಟ್ಟಾರೆ ಎಂಟನೇ ಸ್ಥಾನ ಪಡೆದುಕೊಂಡಿತು. ಅರ್ಜೆಂಟೀನಾದೊಂದಿಗೆ ಜಂಟಿ ಒಂಬತ್ತನೇ ಸ್ಥಾನ ಪಡೆದ ಭಾರತ, ತಾನು ಆತಿಥ್ಯ ವಹಿಸಿದ ನಾಲ್ಕು ವಿಶ್ವಕಪ್‌ಗಳಲ್ಲಿಯೇ ಅತ್ಯಂತ ಕಡಿಮೆ ಮುಕ್ತಾಯವನ್ನು ದಾಖಲಿಸಿದೆ. ಇದು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಐತಿಹಾಸಿಕ ಕಂಚಿನ ಪದಕ ಗೆಲ್ಲುವಂತೆ ಮಾಡಲು ಪ್ರಮುಖ ಪಾತ್ರ ವಹಿಸಿದ್ದ ಮುಖ್ಯ ತರಬೇತುದಾರ ಗ್ರಹಮ್ ರೀಡ್ ಅವರ ನಿರ್ಗಮನಕ್ಕೆ ದಾರಿ ಮಾಡಿಕೊಟ್ಟಿದೆ. ಒಟ್ಟಾರೆಯಾಗಿ, ಭುವನೇಶ್ವರ ಮತ್ತು ಆಸನ ವ್ಯವಸ್ಥೆಯಲ್ಲಿ ಅತಿ ದೊಡ್ಡ ಹಾಕಿ ಕ್ರೀಡಾಂಗಣ ಹೊಂದಿರುವ ರೂರ್ಕೆಲಾದಲ್ಲಿ ಅಪಸವ್ಯಗಳಿಲ್ಲದಂತೆ ಆಯೋಜಿಸಲಾಗಿದ್ದ ಹಾಕಿ ವಿಶ್ವಕಪ್ ಅಲ್ಲಿ ಒಟ್ಟು ೪೪ ಪಂದ್ಯಗಳಲ್ಲಿ ೧೧ ಪಂದ್ಯಗಳು ಡ್ರಾ ಇಲ್ಲ ಶೂಟೌಟ್ಗೆ ಹೋಗುವುದರೊಂದಿಗೆ ಅತ್ಯಂತ ಸಮೀಪದ ಸೆಣಸಾಟಗಳಿಂದ ಕೂಡಿತ್ತು. ಪಂದ್ಯಕ್ಕೆ ಸರಾಸರಿ ೫.೬೬ ಗೋಲುಗಳು ಪುರುಷರ ವಿಶ್ವಕಪ್‌ನಲ್ಲಿಯೇ ಅತ್ಯಧಿಕವಾಗಿದೆ. ಅನೇಕ ಪಂದ್ಯಗಳಿಗೆ ತುಂಬಿದ ಕ್ರೀಡಾಂಗಣಗಳೊಂದಿಗೆ ಕ್ರೀಡಾಕೂಟದ ಯಶಸ್ವಿ ಆಯೋಜನೆ ಪ್ರತಿಷ್ಠಿತ ಸ್ಪರ್ಧೆಗಳ ಆಯೋಜಕನಾಗಿ ಭಾರತದ ಖ್ಯಾತಿಯನ್ನು ಹೆಚ್ಚಿಸಿದೆ. ಇದು ೨೦೨೬ರ ಪುರುಷ ಮತ್ತು ಮಹಿಳಾ ಹಾಕಿ ವಿಶ್ವಕಪ್ನ ಜಂಟಿ ಆತಿಥೇಯರಾದ ಬೆಲ್ಜಿಯಂ ಮತ್ತು ನೆದರ್‌ಲ್ಯಾಂಡ್‌ಗಳಿಗೆ ಒಂದು ಮಾದರಿ ಎಣಿಸಿದೆ. ಇತ್ತ ತವರಿನಲ್ಲಿ, ಈ ಅಪ್ರತಿಮ ಕ್ರೀಡಾಕೂಟವು ಸೃಷ್ಟಿಸಿರುವ ವಾತಾವರಣವನ್ನು ಹಾಕಿಯನ್ನು ಪುನರುಜ್ಜೀವನಗೊಳಿಸಲು ಮಾಜಿ ನಾಯಕ ದಿಲೀಪ್ ಟಿರ್ಕಿ ನೇತೃತ್ವದ ಹಾಕಿ ಇಂಡಿಯಾ ಬಳಸಿಕೊಳ್ಳಬೇಕು.
This editorial has been translated from English, which can be read here.
COMMents
SHARE