ನ್ಯಾಶನಲ್ ಸ್ಟ್ಯಾಟಿಸ್ಟಿಕಲ್ ಆಫೀಸು ಪ್ರಕಟಿಸಿರುವ ಇತ್ತೀಚಿನ ಕೈಗಾರಿಕಾ ಉತ್ಪಾದನಾ ಅಂದಾಜುಗಳು ಡಿಸೆಂಬರ್‌ನಲ್ಲಿ ಒಟ್ಟಾರೆ ಉತ್ಪಾದನೆಯ ಬೆಳವಣಿಗೆಯು ವರ್ಷದಿಂದ ವರ್ಷದ ಲೆಕ್ಕದಲ್ಲಿ ನವೆಂಬರ್‌ನ ಶೇ. ೭.೩ ರಿಂದ ಶೇ. ೪.೩ಗೆ ಕುಸಿದಿದ್ದು, ಆವೇಗ ಕಳೆದುಕೊಂಡಿರುವುದನ್ನು ಸೂಚಿಸುತ್ತದೆ. ಕೈಗಾರಿಕಾ ಉತ್ಪಾದನೆಯ ಸೂಚ್ಯಂಕದ ಮೂರು ಘಟಕಗಳಾದ ಗಣಿಗಾರಿಕೆ, ಉತ್ಪಾದನೆ ಮತ್ತು ವಿದ್ಯುಚ್ಛಕ್ತಿಗಳ ಪೈಕಿ, ಶೇ. ೭೮ರಷ್ಟು ತೂಕ ಹೊಂದಿರುವ ಉತ್ಪಾದನೆಯ ವಿಸ್ತರಣೆ ಕಳೆದ ತಿಂಗಳ ಶೇ. ೬.೪ ರಿಂದ ಶೇ. ೨.೬ಕ್ಕೆ ಕುಸಿದಿರಿವುದು ಒಟ್ಟು ಸೂಚ್ಯಂಕದ ಕುಸಿತಕ್ಕೆ ಮುಖ್ಯ ಕಾರಣವಾಗಿದೆ. ತಿಂಗಳಿಂದ ತಿಂಗಳ ಲೆಕ್ಕದಲ್ಲಿ ಗಣಿಗಾರಿಕೆ ಮತ್ತು ಉತ್ಪಾದನೆಯ ಬೆಳವಣಿಗೆಯು ಕುಸಿದಿದೆ . ಆದರೆ ನವೆಂಬರ್‌ನ ಶೇ. ೧.೫ರಷ್ಟು ಸಂಕೋಚನದ ನಂತರ ವಿದ್ಯುಚ್ಛಕ್ತಿ ಬಳಕೆ ಮಾತ್ರ ಶೇ. ೭.೬ ರಷ್ಟು ಬೆಳೆದಿದೆ. ಗ್ರಾಹಕ ಬಾಳಿಕೆ ಬರುವ ಮತ್ತು ಬಾಳಿಕೆ ಬಾರದ ಸರಕುಗಳು ಮತ್ತು ಬಂಡವಾಳ ಸರಕುಗಳ ಕಳಪೆ ವಹಿವಾಟಿನಿಂದ ಉತ್ಪಾದನಾ ವಲಯದ ಬೆಳವಣಿಗೆಯು ಶೇ. ೬..೯ ರಿಂದ ಶೇ. ೪.೭ಗೆ ಕುಸಿದು ನಿಧಾನಗೊಂಡಿದೆ. ಇದು ಆರ್ಥಿಕತೆಯ ಸದ್ಯದ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ. ಕೋವಿಡ್ ಸಾಂಕ್ರಾಮಿಕದ ಬಳಿಕ ಸೇವಾ ವಲಯದಲ್ಲಿ ಕಾಣಿಸುತ್ತಿರುವ ವೆಚ್ಚಗಳ ಏರಿಕೆ ಇನ್ನೂ ಖಾಸಗಿ ಬಳಕೆಯಲ್ಲಿ ಸ್ಥಿರವಾದ ಹೆಜ್ಜೆ ಮೂಡಿಸಿಲ್ಲ. ಹಬ್ಬದ ಬೇಡಿಕೆಯ ಹಿನ್ನೆಲೆಯಲ್ಲಿ ಪುಟಿದೆದ್ದಿದ್ದ ಗ್ರಾಹಕ ಬಾಳಿಕೆ ಬರುವ ಸರಕುಗಳ ಉತ್ಪಾದನೆಯ ಬೆಳವಣಿಗೆಯು ಡಿಸೆಂಬರ್‌ನಲ್ಲಿ ವರ್ಷದಿಂದ ವರ್ಷದ ಲೆಕ್ಕಕ್ಕೆ ಶೇ. ೧೦.೪ ಮತ್ತು ತಿಂಗಳಿಂದ ತಿಂಗಳಿಗೆ ಶೇ. ೨.೨ರಷ್ಟು ಕುಗ್ಗಿದೆ. ಬಾಳಿಕೆ ಬಾರದ ಸರಕುಗಳ ಉತ್ಪಾದನೆಯ ಬೆಳವಣಿಗೆಯು ತೀವ್ರ ಕುಸಿತ ಅನುಭವಿಸಿ ಶೇ. ೭.೪ಕ್ಕೆ ನಿಂತಿದೆ.
ಬಂಡವಾಳ ಸರಕುಗಳ ದತ್ತಾಂಶವು ಖಾಸಗಿ ವಲಯದ ಹೂಡಿಕೆಯಲ್ಲಿ ಮುಂದುವರಿದ ಅನಿಶ್ಚಿತತೆಯನ್ನು ಸೂಚಿಸುತ್ತದೆ. ಉತ್ಪಾದನೆಯ ಬೆಳವಣಿಗೆಯು ಅನುಕ್ರಮವಾಗಿ ಮತ್ತು ವರ್ಷದಿಂದ ವರ್ಷಕ್ಕೆ ಗಮನಾರ್ಹವಾಗಿ ಕುಸಿಯುತ್ತಾ ಬಂದಿದ್ದು, ಕೈಗಾರಿಕೆಯ ಉತ್ಪಾದನೆ ಮತ್ತು ಉದ್ಯಮಗಳನ್ನು ಪ್ರಾರಂಭಿಸುವಾಗ ಇಲ್ಲ ವಿಸ್ತರಿಸುವಾಗ ಯಂತ್ರೋಪಕರಣಗಳನ್ನು ಕೊಳ್ಳಲು ಹಾಕಿದ ಯೋಜನೆಗಳು ಆವೇಗ ಉಳಿಸಿಕೊಳ್ಳಲು ಹೆಣಗಾಡಿತ್ತಿವೆ. ಈ ವಿಭಾಗದಲ್ಲಿ ವರ್ಷದಿಂದ ವರ್ಷದ ಲೆಕ್ಕದಲ್ಲಿ ನವೆಂಬರ್‌ನ ಶೇ. ೨೧.೬ ಕ್ಕೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ಶೇ. ೭.೬ಕ್ಕೆ ಕುಸಿದು ನಿಧಾನವಾಗಿದೆ. ತಿಂಗಳಿನಿಂದ ತಿಂಗಳ ಲೆಕ್ಕದಲ್ಲಿ ನವೆಂಬರ್‌ನಲ್ಲಿ ಶೇ. ೧೩ರಷ್ಟು ವಿಸ್ತರಿಸಿದ ಬಳಿಕ ಉತ್ಪಾದನೆಯು ಕೇವಲ ಶೇ.೦.೨ರಷ್ಟು ಏರಿಕೆಯಾಗುವುದರೊಂದಿಗೆ ತೀವ್ರ ನಿಧಾನಗತಿ ಹಿಡಿಯಿತು. ಆದರೆ ಪ್ರಾಥಮಿಕ, ಮೂಲಸೌಕರ್ಯ ಮತ್ತು ನಿರ್ಮಾಣ ಸರಕುಗಳು ಸರಿಯಾದ ನೀತಿ ಕ್ರಮಗಳೊಂದಿಗೆ ಸಕಾರಾತ್ಮಕ ಆವೇಗವನ್ನು ಪಡೆಯಬಹುದು ಎಂಬ ಭರವಸೆ ಹುಟ್ಟಿಸುತ್ತವೆ. ಪ್ರಾಥಮಿಕ ಸರಕುಗಳ ಉತ್ಪಾದನೆಯು ಅನುಕ್ರಮವಾಗಿ ಶೇ. ೧.೧ ರಿಂದ ಶೇ. ೯.೨ಕ್ಕೆ ಜಿಗಿದಿದ್ದು ಮತ್ತು ತಿಂಗಳ ಲೆಕ್ಕದಲ್ಲಿ ಮೂಲಸೌಕರ್ಯ ಮತ್ತು ನಿರ್ಮಾಣ ವಲಯಗಳು ನವೆಂಬರ್‌ನ ಶೇ. ೩.೨ ಇಂದ ಶೇ. ೪ಕ್ಕೆ ಏರಿದೆ. ಆರ್‌ಬಿಐನ ಉತ್ಪಾದನಾ ವಲಯದ ಮುನ್ನೋಟದ ಸಮೀಕ್ಷೆಯಂತೆ ಕಂಪೆನಿಗಳು ಪ್ರಸ್ತುತ ತ್ರೈಮಾಸಿಕದಲ್ಲಿ ದೇಶೀಯ ಮತ್ತು ಸಾಗರೋತ್ತರ ಬೇಡಿಕೆಯಲ್ಲಿ ಕೊಂಚ ಏರಿಕೆಯನ್ನು ನಿರೀಕ್ಷಿಸುತ್ತಿದ್ದು, ಸರ್ಕಾರದ ನೀತಿ ತಮಗೆ ಬೆಂಬಲವಾಗಿ ನಿಲ್ಲುವುದು ನಿರ್ಣಾಯಕ ಎಂದು ಭಾವಿಸಿವೆ. ಸರ್ಕಾರದ ಬಂಡವಾಳ ವೆಚ್ಚದ ಗಣನೀಯ ಹೆಚ್ಚಳದ ಮೂಲಕ ಮೂಲಸೌಕರ್ಯಕ್ಕೆ ಉತ್ತೇಜನ ನೀಡುವ ಕೇಂದ್ರ ಆಯವ್ಯಯವು ನಿರ್ಮಾಣ ಸರಕುಗಳಿಗೆ ದೊಡ್ಡ ಪ್ರೋತ್ಸಾಹ ಒದಗಿಸಬೇಕಿದೆ. ಇದು ಬರುವ ತಿಂಗಳುಗಳಲ್ಲಿ ಇತರ ವಲಯಗಳಿಗೂ ಸಹಕಾರಿ ಆಗಬಹುದು.
This editorial has been translated from English, which can be read here.
COMMents
SHARE