ADVERTISEMENT

ಜೈಲಿಗೆ ಹೋಗುತ್ತಿರುವ ಎರಡನೇ ಮಂತ್ರ

December 23, 2023 10:54 am | Updated 10:54 am IST

ಪಕ್ಷದ ಪ್ರಮುಖ ಪದಾಧಿಕಾರಿ ಮತ್ತು ಮಂತ್ರಿ ಭ್ರಷ್ಟಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ತೀರ್ಪು ಬಂದಿರುವುದು ಡಿಎಂಕೆಗೆ ಹಿನ್ನೆಡೆ 

ಹಿರಿಯ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪದಾಧಿಕಾರಿ ಕೆ. ಪೊನ್ಮುಡಿ ಅವರನ್ನು ಮದ್ರಾಸ್ ಹೈಕೋರ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದೆ. ಇದರಿಂದ ಅವರು ಸರ್ಕಾರದಲ್ಲಿ ತಮ್ಮ ಮಂತ್ರಿ ಸ್ಥಾನವನ್ನೂ ಕಳೆದುಕೊಂಡರು. ತಮ್ಮದೇ ಪಕ್ಷ ಅಧಿಕಾರದಲ್ಲಿದ್ದಾಗ ಒಬ್ಬ ಮಂತ್ರಿಯನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ತೀರ್ಪು ಬಂದ ಅಪರೂಪದ ಪ್ರಕರಣ ಇದು. ಸಾರ್ವಜನಿಕ ಹುದ್ದೆಗಳನ್ನು ಅಲಂಕರಿಸಿರುವ ಯಾವುದೇ ಭ್ರಷ್ಟ ವ್ಯಕ್ತಿಯನ್ನು ಶಿಕ್ಷಿಸುವ ಮತ್ತು ಅವರನ್ನು ಆ ಹುದ್ದೆಯಿಂದ ತೆಗೆದುಹಾಕುವ ಯಾವುದೇ ತೀರ್ಪು ಸ್ವಾಗತಾರ್ಹ. ಪೊನ್ಮುಡಿ ಅವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಏನು ತೀರ್ಪು ನೀಡಲಿದೆ ಎಂದು ನೋಡಬೇಕಿದೆ. ಅದು ವಿಚಾರಣಾ ನ್ಯಾಯಾಲಯದಿಂದ ಅವರ ಖುಲಾಸೆಯನ್ನು ಎತ್ತಿಹಿಡಿಯುತ್ತದೆಯೋ ಅಥವಾ ಮದ್ರಾಸ್ ಹೈಕೋರ್ಟ್‌ ಅದನ್ನು ರದ್ದುಗೊಳಿಸಿ ಅವರನ್ನು ತಪ್ಪಿತಸ್ಥರೆಂದು ನೀಡಿದ ತೀರ್ಪನ್ನು ಎತ್ತಿಹಿಡಿಯುತ್ತದೆಯೋ ಕಾದುನೋಡಬೇಕಿದೆ. ಸದ್ಯಕ್ಕೆ ಅವರು ಮತ್ತು ಅವರ ಪತ್ನಿ ₹೧.೭೨ ಕೋಟಿಯಷ್ಟು ವಿವರಿಸಲಾಗದ ಆಸ್ತಿ ಹೊಂದಿದ್ದಾರೆಂದು ಅವರಿಗೆ ೩ ವರ್ಷಗಳ ಸಜೆ ಮತ್ತು ₹೫೦ ಲಕ್ಷ ದಂಡ ವಿಧಿಸಲಾಗಿದೆ. ೩೦ ದಿನಗಳ ಕಾಲ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿ ಅದರ ನಂತರ ಶಿಕ್ಷೆ ಅಮಲು ಮಾಡಲಾಗುತ್ತದೆ ಎಂದು ಕೋರ್ಟ್ ಹೇಳಿದೆ. ಈ ಪ್ರಕರಣವು ೨೦೦೬-೧೧ರ ಡಿಎಂಕೆ ಸರ್ಕಾರದ ಅವಧಿಯಲ್ಲಿ ನಡೆದ ಪ್ರಕರಣವಾಗಿದ್ದು, ಈ ಬಗ್ಗೆ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಆಡಳಿತದ ಕಾಲದಲ್ಲಿ ತನಿಖೆ ಮತ್ತು ವಿಚಾರಣೆ ನಡೆಸಲಾಯಿತು. ಪೊನ್ಮುಡಿ ಅವರು ತಮ್ಮ ಮಗ ಮತ್ತು ಸಂಬಂಧಿಕರಿಗೆ ಕೆಂಪು ಮರಳು ಗಣಿಗಾರಿಕೆಗೆ ಅಕ್ರಮ ಪರವಾನಗಿ ನೀಡಿದ್ದಾರೆ ಎಂಬ ಆರೋಪದ ಹಣ ವರ್ಗಾವಣೆ ಅಂಶದ ಬಗ್ಗೆ ಈಗ ಜಾರಿ ನಿರ್ದೇಶನಾಲಯ ಸಹ ತನಿಖೆ ನಡೆಸುತ್ತಿದೆ. ಮತ್ತೊಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ವಿ.ಸೆಂಥಿಲ್ ಬಾಲಾಜಿ ನಂತರ ಪೊನ್ಮುಡಿ ಜೈಲಿಗೆ ಹೋಗುತ್ತಿರುವ ಎರಡನೇ ಮಂತ್ರಿ.

ಮತ್ತು ಅವರ ಪತ್ನಿ ಪಿ.ವಿಶಾಲಾಕ್ಷಿಯವರ ಆದಾಯವನ್ನು ಸ್ವತಂತ್ರವಾಗಿ ಮೌಲ್ಯಮಾಪನ ಮಾಡಬೇಕು ಮತ್ತು ವಿಜಿಲೆನ್ಸ್ ತನಿಖಾಧಿಕಾರಿಗಳು ತಮ್ಮ ಆದಾಯವನ್ನು ಒಟ್ಟುಗೂಡಿಸಿ ಇಬ್ಬರ ಒಟ್ಟು ಆಸ್ತಿ ಅವರ ಆದಾಯಕ್ಕೆ ಹೋಲಿಸಿದರೆ ಶೇ. ೬೫ರಷ್ಟು ಹೆಚ್ಚಿದೆ ಎಂದು ವಾದಿಸಿರುವುದು ದೋಷಪೂರಿತವಾಗಿದೆ ಎಂಬುದು ಅವರ ಮೇಲ್ಮನವಿಯ ಪ್ರಮುಖ ವಾದವಾಗಿರುತ್ತದೆ. ಈ ವಾದವನ್ನು ಒಪ್ಪಿ ಕೆಳಹಂತದ ನ್ಯಾಯಾಲಯ ಅವರನ್ನು ನಿರ್ದೋಷಿ ಎಂದು ತೀರ್ಪು ನೀಡಿತ್ತು. ಆದರೆ ಮದ್ರಾಸ್ ಹೈಕೋರ್ಟಿನ ನ್ಯಾಯಮೂರ್ತಿ ಜಿ. ಜಯಚಂದ್ರನ್ ಅವರು ವಿಶಾಲಾಕ್ಷಿ ಅವರು ಸ್ವತಂತ್ರ ವ್ಯಾಪಾರ ಮತ್ತು ಕೃಷಿ ಆದಾಯ ಹೊಂದಿದ್ದಾರೆ ಎಂಬ ವಾದವನ್ನು ಒಪ್ಪಲಿಲ್ಲ ಮತ್ತು ವಿಚಾರಣಾ ನ್ಯಾಯಾಧೀಶರು “ಹೆಚ್ಚಿನ ಆದಾಯ” ತೋರಿಸುವ ತಡವಾಗಿ ಸಲ್ಲಿಸಿದ ತೆರಿಗೆ ಪತ್ರಗಳನ್ನು ಸ್ವೀಕರಿಸಿದ್ದು ತಪ್ಪು ಎಂದು ಟೀಕಿಸಿದ್ದಾರೆ. ಆಕೆಯು ನಡೆಸುತ್ತಿರುವ ವ್ಯವಹಾರಗಳಿಗೆ ನಿಜವಾದ ಮಾರಾಟ ಮತ್ತು ಲಾಭದ ದಾಖಲೆಪತ್ರಗಳಿಲ್ಲದೆ ಕೇವಲ ಆದಾಯ ಇದೆ ಎಂದು ಹೇಳುವುದನ್ನಷ್ಟೇ ಒಪ್ಪಲಾಗುವುದಿಲ್ಲ ಎಂಬ ನ್ಯಾಯಾಧೀಶರ ನಿಲುವು ಸಮಂಜಸವಾಗಿದೆ. ವಿಶಾಲಾಕ್ಷಿಯವರು ತೋರಿಸಿರುವ ಕೃಷಿ ಆದಾಯವನ್ನು ಕೃಷಿಯೋಗ್ಯ ಭೂಮಿ ಹಿಡುವಳಿಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಿದ ಪ್ರಾಸಿಕ್ಯೂಷನ್‌ನ ಪರಿಣಿತ ಸಾಕ್ಷಿಗಳು ಆ ಭೂಮಿಯಲ್ಲಿ ಅಷ್ಟು ಆದಾಯ ಸಾಧ್ಯವಿಲ್ಲ ಎಂದು ತೋರಿಸಿದ್ದಾರೆ. ಭ್ರಷ್ಟಾಚಾರದ ಆರೋಪಗಳ ಸುರಿಮಳೆ ಎದುರಿಸುತ್ತಿರುವ ಸಮಯದಲ್ಲಿ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯೊಬ್ಬರಿಗೆ ಶಿಕ್ಷೆಯಾಗಿರುವುದು ಆಡಳಿತಾರೂಢ ಡಿಎಂಕೆಗೆ ರಾಜಕೀಯ ಹಿನ್ನಡೆಯಾಗಿದೆ. ಪೊನ್ಮುಡಿ ಅವರನ್ನು ತಪ್ಪಿತಸ್ಥರು ಎಂಬ ಮದ್ರಾಸ್ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡುತ್ತದೆ ಎಂದು ಪಕ್ಷವು ಆಶಿಸುತ್ತಿದೆ. ಆದರೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆ ಅಮಲು ಮಾಡಲು ತಡೆ ನೀಡಲಾಗುತ್ತದೆಯೇ ಹೊರತು ಸಂಪೂರ್ಣ ತೀರ್ಪಿಗೆ ತಡೆ ನೀಡುವುದು ತೀರಾ ಅಪರೂಪ. ತಮ್ಮ ಇಬ್ಬರು ಹಿರಿಯ ನಾಯಕರು ಮತ್ತು ಮಂತ್ರಿಗಳ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿರುವುದು ಡಿಎಂಕೆ ಸರ್ಕಾರದ ಮೇಲಿನ ಸಾರ್ವಜನಿಕ ವಿಶ್ವಾಸದ ಮೇಲೆ ಅಡ್ಡಪರಿಣಾಮ ಬೀರುವುದು ಖಚಿತ.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT