ADVERTISEMENT

ಹಗೆತನವನ್ನು ಕೈಬಿಡಬೇಕು

Updated - March 21, 2023 11:26 am IST

Published - March 21, 2023 08:37 am IST

ಅಧ್ಯಕ್ಷರು ಪಕ್ಷಾತೀತವಾಗಿ ನಡೆದುಕೊಂಡಿದ್ದರೆ ಕೇರಳ ವಿಧಾನಸಭೆಯ ಗದ್ದಲವನ್ನು ತಪ್ಪಿಸಬಹುದಿತ್ತು.

ಪ್ರಜಾಪ್ರಭುತ್ವದಲ್ಲಿ ಆಡಳಿತ ಮತ್ತು ಪ್ರತಿ ಪಕ್ಷಗಳ ನಡುವಿನ ವೈರುಧ್ಯವು ಅನಿವಾರ್ಯ. ಭಿನ್ನಾಭಿಪ್ರಾಯಗಳು ಮತ್ತು ವಿವಿಧ ದೃಷ್ಟಿಕೋನಗಳನ್ನು ಮುನ್ನೆಲೆಗೆ ತರುವುದರಿಂದ ಇದು ಪ್ರಜಾಪ್ರಭುತ್ವದಲ್ಲಿ ನಿರ್ಣಾಯಕ ಕೂಡ. ಶಾಸಕಾಂಗ ಚರ್ಚೆಯ ಮೂಲಕ ಒಮ್ಮತ ಮೂಡಿದಾಗ ಪ್ರಜಾಪ್ರಭುತ್ವ ಅರಳುತ್ತದೆ. ಆದರೆ ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳ ಮೇಲೆ ಭಿನ್ನಾಪ್ರಾಯಗಳು ಚರ್ಚೆಯ ಮೂಲಕ ಇತ್ಯರ್ಥವಾಗದೇ ಸಂಘರ್ಷಕ್ಕೆ ಕಾರಣವಾಗುವುದು ಉತ್ತಮ ಶಾಸಕಾಂಗ ನಡವಳಿಕೆಯನ್ನು ಸೂಚಿಸುವುದಿಲ್ಲ. ಕೇರಳದಲ್ಲಿ ಆಡಳಿತ ಮತ್ತು ಪ್ರತಿ ಪಕ್ಷಗಳ ನಡುವೆ ಸಂಬಂಧಗಳು ಮುರಿದುಬಿದ್ದಿದ್ದು ಶಾಸಕಾಂಗ ವ್ಯವಹಾರವು ಸ್ಥಗಿತಗೊಂಡಿದೆ. ಕಳೆದ ವಾರ ಪ್ರತಿ ಪಕ್ಷ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ನೀಡಿದ ನಿಯಮ ೫೦ರ ಸೂಚೆನೆಗೆ ವಿಧಾನಸಭಾಧ್ಯಕ್ಷರು ಹಲವು ಬಾರಿ ಚರ್ಚೆಗೆ ಅವಕಾಶ ನಿರಾಕರಿಸಿದ್ದು ಸಂಘರ್ಷಕ್ಕೆ ದಾರಿ ಮಾಡಕೊಟ್ಟು ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು. ವಿರೋಧಪಕ್ಷದ ಹಲವು ಶಾಸಕರ ಮೇಲೆ ಪ್ರಕರಣಗಳು ಕೂಡಾ ದಾಖಲಾಗಿವೆ. ವಿಧಾನಸಭಾಧ್ಯಕ್ಷರಾದ ಎ. ಏನ್. ಶಂಶೀರ್ ಅವರು ನಿಯಮ ೫೦ರಡಿ ಚರ್ಚೆಗೆ ಅವಕಾಶ ನೀಡದ ಬಳಿಕ ಸಭಾ ಕಲಾಪಗಳನ್ನು ವಿಡಂಬನೆ ಮಾಡುವುದು, ಅಧ್ಯಕ್ಷರ ವಿರುದ್ಧ ಅಸಂಸದೀಯ ರೀತಿಯಲ್ಲಿ ಪ್ರತಿಭಟಿಸುವುದು ತಪ್ಪೇ. ಆದರೆ ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳ ಕುರಿತು ಚರ್ಚಿಸುವಲ್ಲಿ ಪ್ರತಿಪಕ್ಷಗಳ ಶಾಸಕಾಂಗ ಸವಲತ್ತುಗಳನ್ನು ಗೌರವಿಸುವ ಜವಾಬ್ದಾರಿ ಆಡಳಿತ ಪಕ್ಷ ಮತ್ತು ವಿಧಾನಸಭಾಧ್ಯಕ್ಷರದು. ನಿಯಮ ೫೦ರಡಿ ಚರ್ಚೆಗೆ ಪದೇ ಪದೇ ಅವಕಾಶ ನಿರಾಕರಿಸಿರುವುದು ಮತ್ತು ವಿರೋಧ ಪಕ್ಷದ ಸದಸ್ಯರ ವಿರುದ್ಧ ಗಂಭೀರ ಮೊಕದ್ದಮೆಗಳನ್ನು ದಾಖಲಿಸಿರುವುದು ಸಂಘರ್ಷವನ್ನು ಇನ್ನಷ್ಟು ಹೆಚ್ಚಿಸಿದೆಯಷ್ಟೇ. ಕಲಾಪಗಳ ಅಧಿಕೃತ ಪ್ರಸಾರಕವಾಗಿರುವ ಸಭಾ ಟಿವಿಯಲ್ಲಿ ತಮ್ಮ ಹೇಳಿಕೆಗಳಿಗೆ ಸಾಕಷ್ಟು ಒತ್ತು ನೀಡುವುದಿಲ್ಲ ಎಂಬ ವಿರೋಧ ಪಕ್ಷದ ಆರೋಪದಲ್ಲಿಯೂ ಹುರುಳಿದ್ದಂತಿದೆ.

ಸೋಮವಾರ ವಿಧಾನಸಭಾಧ್ಯಕ್ಷರು ಕಾಂಗ್ರೆಸ್ ಶಾಸಕರೊಬ್ಬರ ಮೇಲೆ ಅವರು ಮಾಡಿದ ಟೀಕೆಯನ್ನು ಕಡತದಿಂದ ತೆಗೆದುಹಾಕುವ ಮೂಲಕ ರಾಜಿಯ ಸೂಚನೆ ನೀಡಿದ್ದಾರೆ. ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳ ಮೇಲೆ ಚರ್ಚಿಸಲು ನಿಯಮ ೫೦ರಡಿ ಸೂಚನೆಯೂ ಸೇರಿದಂತೆ ವಿರೋಧಪಕ್ಷದ ಎಲ್ಲ ಶಾಸಕಾಂಗ ಹಕ್ಕುಗಳನ್ನು ಎತ್ತಿಹಿಡಿಯುವ ಮತ್ತು ಸಭಾ ಟಿವಿಯನ್ನು ಪಕ್ಷಾತೀತವಾಗಿ ನಡೆಸುವ ಆಶ್ವಾಸನೆ ನೀಡಿದ್ದಾರೆ. ವಿರೋಧ ಪಕ್ಷದ ಶಾಸಕರ ವಿರುದ್ಧ ಹೂಡಿರುವ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಮತ್ತು ಎರಡೂ ಕಡೆಯವರು ಶಾಸಕಾಂಗ ಕಲಾಪಗಳ ಪುನರಾರಂಭಕ್ಕೆ ಹೆಜ್ಜೆ ಇಡಬೇಕು ಎಂಬುದರ ಸೂಚನೆ ಇದು. ಸಾಮಾಜಿಕ-ಆರ್ಥಿಕ ವಿಷಯಗಳಲ್ಲಿ ಕೇರಳವು ಯಾವತ್ತೂ ಮುಂದಡಿ ಇಟ್ಟು ಭಾರತಕ್ಕೆ ಹಾದಿ ತೋರಿದೆ. ಬ್ರಹ್ಮಪುರಂ ಬೆಂಕಿ ಅವಘಢವೂ ಸೂಚಿಸುವಂತೆ ಅಭಿವೃದ್ಧಿ ಮತ್ತು ಪರಿಸರ ಸುಸ್ಥಿರತೆಯ ನಡುವಿನ ಸಮತೋಲನ ಕಾಪಾಡಿಕೊಳ್ಳಲು ಹವಣಿಸುತ್ತಿರುವ ರಾಜ್ಯವಾಗಿದೆ. ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳ ಮೇಲೆ ಆರೋಗ್ಯಕರ ಚರ್ಚೆ ಎಲ್.ಡಿ.ಎಫ್. ಸರ್ಕಾರಕ್ಕೆ ಎಚ್ಚರಿಕೆ ನೀಡಿ ಉತ್ತಮ ಆಡಳಿತ ನೀಡಲು ಸಹಾಯ ಮಾಡುತ್ತದೆ. ಶಾಸಕಾಂಗ ಕಲಾಪಗಳನ್ನು ಪಕ್ಷಾತೀತವಾಗಿ ನಡೆಸಬೇಕೆಂಬ ವಿರೋಧ ಪಕ್ಷದ ಕರೆಗೆ ಆಡಳಿತ ಪಕ್ಷ ಮತ್ತು ಮುಖ್ಯಮಂತ್ರಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ರಾಜ್ಯದಲ್ಲಿ ಎರಡು ರಂಗಗಳ ನಡುವಿನ ಸಂಬಂಧಗಳು ಸುಧಾರಣೆಯಾಗುವುದೇ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ.

This editorial has been translated from English, which can be read here.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT