ADVERTISEMENT

ಬೆಳಕು ಮೂಡಲಿ

October 05, 2023 10:58 am | Updated 10:58 am IST

ಎಲೆಕ್ಟ್ರಾನ್ ಗುಣಲಕ್ಷಣಗಳಲ್ಲಿನ ಬದಲಾವಣೆಗಳನ್ನು ಅಳೆಯುವ ತಂತ್ರಗಳ ಆವಿಷ್ಕಾರಕ್ಕೆ ಈ ಬಾರಿ ಭೌತಶಾಸ್ತ್ರ ನೊಬೆಲ್ ದೊರೆತಿದೆ.

ಕ್ವಾಂಟಮ್ ಮೆಕ್ಯಾನಿಕ್ಸ್ ನಿಯಮಗಳ ಪ್ರಕಾರ, ವಸ್ತುವಿನಲ್ಲಿರುವ (ಉದಾಹರಣೆಗೆ ಒಂದು ಹಣ್ಣು ಇಲ್ಲವೇ ಕಲ್ಲಿನಲ್ಲಿನ) ಎಲೆಕ್ಟ್ರಾನ್‌ಗಳ ಗಮನಿಸಬಹುದಾದ ಗುಣಲಕ್ಷಣಗಳು ಕೆಲವು ನೂರು ಅಟೋಸೆಕೆಂಡ್‌ಗಳಲ್ಲಿ ಬದಲಾಗುತ್ತವೆ. ಒಂದು ಅಟೋಸೆಕೆಂಡ್ ಅಂದರೆ ೧೦ e -೧೮ ಸೆಕೆಂಡುಗಳು. ಈ ಅತ್ಯಂತ ಕ್ಷಿಪ್ರ ಬದಲಾವಣೆಗಳನ್ನು ಅಧ್ಯಯನ ಮಾಡಲು ವಿಶೇಷ ಪರಿಕರಗಳ ಅಗತ್ಯವಿದೆ. ಈ ಪರಿಕರಗಳನ್ನು ನಿರ್ಮಿಸಿದ್ದಕ್ಕಾಗಿ ಆನ್ನೆ ಎಲ್’ಹುಲ್ಲಿಯರ್, ಪಿಯರೆ ಅಗೋಸ್ಟಿನಿ ಮತ್ತು ಫೆರೆಂಕ್ ಕ್ರೌಸ್ಜ್ ಅವರಿಗೆ ೨೦೨೩ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ೧೯೮೦ರ ದಶಕದ ಉತ್ತರಾರ್ಧದಿಂದ ಡಾ. ಎಲ್’ಹುಲ್ಲಿಯರ್ ನೇತೃತ್ವ ವಹಿಸಿದ ಹಲವಾರು ಅಧ್ಯಯನಗಳು ಜಡ ಅನಿಲದ ಮೇಲೆ ಅತಿಗೆಂಪು ಕಿರಣವನ್ನು (infrared beam) ಹಾಯಿಸಿದಾಗ ಅದು ಹಲವು ಓವರ್‌ಟೋನ್ ತರಂಗಗಳನ್ನು ಉತ್ಪಾದಿಸುತ್ತದೆ. ಈ ತರಂಗಗಳ ತರಂಗಾಂತರವು ‘ಮೂಲ’ ಬೆಳಕಿನ ತರಂಗದ ಪೂರ್ಣಾಂಕ-ಭಾಗವಾಗಿರುತ್ತದೆ ಎಂದು ಕಂಡುಕೊಂಡಿವೆ. ಅಷ್ಟೇ ಅಲ್ಲ ಈ ತಂಡವು ಮೂಲ ತರಂಗದ ಆವರ್ತನ ಮತ್ತು ಮೇಲ್ಪದರಗಳ ತೀವ್ರತೆಯ ನಡುವಿನ ವಿಲಕ್ಷಣ ಸಂಬಂಧವನ್ನು ಸಹ ಗಮನಿಸಿತು ಮತ್ತು ಕ್ವಾಂಟಮ್ ಮೆಕ್ಯಾನಿಕ್ಸಿನ ನಿಯಮಗಳನ್ನು ಬಳಸಿ ಅದನ್ನು ವಿವರಿಸಿತು. ಇದು ಒಂದು ಮೈಲಿಗಲ್ಲು. ಓವರ್‌ಟೋನ್ ತರಂಗಗಳ ಶಿಖರಗಳು ಸಾಲಾಗಿ ನಿಂತರೆ, ಅವು ಹೆಚ್ಚು ತೀವ್ರವಾದ ಶಿಖರವನ್ನು (ರಚನಾತ್ಮಕ ಹಸ್ತಕ್ಷೇಪ) ಉತ್ಪಾದಿಸುತ್ತದೆ, ಅದೇ ಒಂದು ತರಂಗದ ಶಿಖರವು ಇನ್ನೊಂದರ ಕುಳಿಯೊಂದಿಗೆ ಹೊಂದಿಕೆಯಾದಾಗ ಎರಡೂ ರದ್ದಾಗುತ್ತದೆ (ವಿನಾಶಕಾರಿ ಹಸ್ತಕ್ಷೇಪ). ಭೌತವಿಜ್ಞಾನಿಗಳು ಒಂದು ಜಡ ಅನಿಲವು ಕೆಲವು ಅಟೊಸೆಕೆಂಡ್‌ಗಳ ಅವಧಿಗೆ ತೀವ್ರವಾದ ಶಿಖರಗಳನ್ನು ಹೊರಸೂಸುವಂತೆ ಮಾಡಿ ಈ ಬಲವರ್ಧನೆಯ ಪರಿಣಾಮವನ್ನು ಸಾಧಿಸಬಹುದು ಎಂದು ಕಂಡುಕೊಂಡರು. ಡಾ. ಅಗೋಸ್ಟಿನಿ ಮತ್ತು ತಂಡವು ೨೦೦೧ರಲ್ಲಿ ೨೫೦ ಅಟೋಸೆಕೆಂಡ್‌ಗಳ ಅವಧಿಯೊಂದಿಗೆ ಬೆಳಕನ್ನು ಉತ್ಪಾದಿಸುವ ಮೂಲಕ ಇದನ್ನು ಪ್ರದರ್ಶಿಸಿತು. ಅದೇ ವರ್ಷ, ಡಾ. ಕ್ರೌಸ್ಜ್ ಮತ್ತು ತಂಡವು ೬೫೦ ಅಟೋಸೆಕೆಂಡ್‌ಗಳ ಅವಧಿಯ ಕಿರಣವನ್ನು ಪ್ರತ್ಯೇಕಿಸಿ ಕ್ರಿಪ್ಟಾನ್ ಅಣುವಿನಿಂದ ಹೊರಹಾಕಲ್ಪಟ್ಟ ಎಲೆಕ್ಟ್ರಾನ್‌ಗಳ ಚಲನ ಶಕ್ತಿಯನ್ನು ಅಳೆಯಲು ಅದನ್ನು ಬಳಸಿದರು. ಇದರೊಂದಿಗೆ ಅಟ್ಟೋಸೆಕೆಂಡ್ ಭೌತಶಾಸ್ತ್ರವು ಪ್ರವರ್ಧಮಾನಕ್ಕೆ ಬಂತು.

ಈ ವರ್ಷದ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಕೋವಿಡ್-೧೯ ಸಾಂಕ್ರಾಮಿಕದ ಹರಡುವಿಕೆಯನ್ನು ತಡೆದ ಎಂ-ಆರ್‌ಎನ್‌ಎ ಲಸಿಕೆಗಳ ಆವಿಷ್ಕಾರಕ್ಕೆ ನೀಡಲಾಯಿತು. ಈ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದ ಆವಿಷ್ಕಾರವು ಮನುಕುಲಕ್ಕೆ ಅಪಾರ ಪ್ರಯೋಜನ ಮಾಡಿದೆ. ಆದರೆ ಅಟೊಸೆಕೆಂಡ್ ಭೌತಶಾಸ್ತ್ರಕ್ಕೆ ಇನ್ನೂ ನೇರ ಪ್ರಯೋಜನ ಇಲ್ಲ. ಆದರೆ ಪುರಾವೆಗಳ ಅನುಪಸ್ಥಿತಿಯು ಅನುಪಸ್ಥಿತಿಯ ಪುರಾವೆಯಲ್ಲ. ಬಯೋಕೆಮಿಸ್ಟ್ರಿ, ಡಯಾಗ್ನೋಸ್ಟಿಕ್ಸ್, ಸೂಪರ್ ಕಂಡಕ್ಟಿವಿಟಿ ಮತ್ತು ಉತ್ಪಾದನಾ ತಂತ್ರಗಳೂ ಒಳಗೊಂಡಂತೆ ಹಲವು ಕ್ಷೇತ್ರಗಳಲ್ಲಿ ಎಲೆಕ್ಟ್ರಾನ್‌ಗಳ ನಿರ್ದಿಷ್ಟ ನಡವಳಿಕೆ ನಿರ್ಣಾಯಕ. ಈ ಬಾರಿಯ ನೊಬೆಲ್ ಪ್ರಶಸ್ತಿ ವಿಜೇತರ ಆವಿಷ್ಕಾರದಿಂದ ಅಟೊಸೆಕೆಂಡ್‌ಗಳಲ್ಲಿ ಇರುವ ಮತ್ತು ಇಲ್ಲವಾಗುವ ವಿದ್ಯಮಾನಗಳನ್ನು ಅಧ್ಯಯನ ಮಾಡಬಹುದಾಗಿದೆ. ಇದು ಇಲ್ಲಿಯವರೆಗೆ ತಿಳಿದಿಲ್ಲದ ಹಲವು ವಿದ್ಯಮಾನಗಳ ಆವಿಷ್ಕಾರಕ್ಕೆ ದಾರಿ ಮಾಡಿಕೊಡಬಹುದು. ಇದಲ್ಲದೆ ಕಾಲಾನಂತರದಲ್ಲಿ ಒಂದು ಆವಿಷ್ಕಾರದ ಮೌಲ್ಯ ಏನಾಗಿರಬಹುದು ಎಂದು ಅಳೆಯಲು ಸದ್ಯ ಮಾನವರ ಬಳಿ ಎಲ್ಲ ಮಾಹಿತಿ ಇರುವುದಿಲ್ಲ. ೨೦೧೬ರ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತರು ಪ್ರತ್ಯೇಕ ಅಣುಗಳೊಂದಿಗೆ ಮೋಟಾರುಗಳನ್ನು ನಿರ್ಮಿಸಿದ್ದಕ್ಕಾಗಿ ಪ್ರಶಸ್ತಿ ಪಡೆದರು. ಆ ಸಮಯದಲ್ಲಿ ಇದರಿಂದ ಯಾವುದೇ ಪ್ರಯೋಜನ ಇರಲಿಲ್ಲ. ಆದರೆ ಅದನ್ನು ಸಾಧಿಸಲು ಅವರು ರಸಾಯನಶಾಸ್ತ್ರದ ಇತರ ಕ್ಷೇತ್ರಗಳನ್ನು ಸುಧಾರಿಸುವ ತಂತ್ರಗಳನ್ನು ರೂಪಿಸಿದರು. ಈ ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರಾದ ಜೆ. ಫ್ರೇಸರ್ ಸ್ಟೋಡಾರ್ಡ್ ಈ ಹಿಂದೆ ಮಾಡಲು ಅಸಾಧ್ಯವೆನ್ನಿಸಿದ್ದನ್ನು ಸುಲಭಸಾಧ್ಯವಾಗಿಸುವಲ್ಲಿ ಒಂದು ಮೌಲ್ಯವಿದೆ ಮತ್ತು “ಅದರ ಪ್ರಯೋಜನಗಳೇನು ಎಂದು ಅನ್ವೇಷಿಸಲು ನಾವೂ ಉತ್ಸುಕರಾಗಿದ್ದೇವೆ” ಎಂದು ಹೇಳಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT