ADVERTISEMENT

ಡೊನಾಲ್ಡ್ ಟ್ರಂಪ್ ಅವರ ಅನರ್ಹತೆ

December 21, 2023 11:08 am | Updated 11:08 am IST

ಚುನಾವಣಾ ವರ್ಷದಲ್ಲಿ ಅಮೆರಿಕಾ ಕೆಟ್ಟ ಧೃವೀಕರಣಕ್ಕೆ ಸಾಕ್ಷಿಯಾಗಲಿದೆ

ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರ್ವಜನಿಕ ಹುದ್ದೆ ಅಲಂಕರಿಸಲು “ದಂಗೆ ಅಥವಾ ಬಂಡಾಯ” ದಲ್ಲಿ ತೊಡಗಿಸಿಕೊಳ್ಳಬಾರದು ಎಂಬ ಸಾಂವಿಧಾನಿಕ ಷರತ್ತನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ ಯುಎಸ್ ಸ್ಟೇಟ್ ಆಫ್ ಕೊಲೊರಾಡೋದ ಸುಪ್ರೀಂ ಕೋರ್ಟ್, ಅವರನ್ನು ೨೦೨೪ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿರ್ಬಂಧಿಸಿದೆ. ಜನವರಿ ೬, ೨೦೨೧ರಂದು ಚುನಾವಣೆಯ ಫಲಿತಾಂಶವನ್ನು ಒಪ್ಪದಂತೆ ಪ್ರತಿಭಟನಾಕಾರರನ್ನು ಪ್ರಚೋದಿಸುವಲ್ಲಿ ಟ್ರಂಪ್ ಅವರು ವಹಿಸಿದ ಪಾತ್ರಕ್ಕಾಗಿ ಕೊಲೊರಾಡೋದಲ್ಲಿ ಮುಂದಿನ ವರ್ಷದ ಚುನಾವಣೆಯಲ್ಲಿ ಅವರು ಅಭ್ಯರ್ಥಿ ಆಗುವಂತಿಲ್ಲ ಎಂದು ನ್ಯಾಯಾಲಯ ೪-೩ ಅಂತರದ ತೀರ್ಪು ನೀಡಿದೆ. ಈ ಪ್ರತಿಭಟನಾಕಾರರು ವಾಷಿಂಗ್ಟನ್‌ನಲ್ಲಿರುವ ಯುಎಸ್ ಕ್ಯಾಪಿಟಲ್‌ನ ಕಟ್ಟಡಗಳ ಮೇಲೆ ದಾಳಿ ಮಾಡಿದರು. ಈ ತೀರ್ಪು ಅಮೆರಿಕಾ ಸಂವಿಧಾನದ ೧೪ನೇ ತಿದ್ದುಪಡಿಯ ಸೆಕ್ಷನ್ ೩ರ ಬಳಕೆಯ ಐತಿಹಾಸಿಕ ಸಂಧರ್ಭವಾಗಿದೆ. ಅದರಲ್ಲೂ ಅತ್ಯಂತ ಜನಪ್ರಿಯ ರಿಪಬ್ಲಿಕನ್ ಅಭ್ಯರ್ಥಿ ಮತ್ತು ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿರುವ ಅಭ್ಯರ್ಥಿಯನ್ನು ಈ ತೀರ್ಪು ಸ್ಪರ್ಧೆಯಿಂದಲೇ ಅನರ್ಹಗೊಳಿಸುತ್ತದೆ. ಈ ನಿಬಂಧನೆಯು (“ದಂಗೆಯ ಷರತ್ತು”) ಅಮೆರಿಕಾದ ಸಂವಿಧಾನದ ವಿರುದ್ಧ ದಂಗೆಯಲ್ಲಿ ಭಾಗವಹಿಸಿದ ಯಾವುದೇ ವ್ಯಕ್ತಿಯನ್ನು ಮುಂದೆ ಕಾಂಗ್ರೆಸ್, ಸೇನೆ, ಕೇಂದ್ರ ಮತ್ತು ರಾಜ್ಯಗಳಲ್ಲಿ ಯಾವುದೇ ಸಾರ್ವಜನಿಕ ಹುದ್ದೆಗಳನ್ನು ಅಲಂಕರಿಸುವಂತಿಲ್ಲ ಎಂದು ಹೇಳುತ್ತದೆ. ೧೮೬೮ರಲ್ಲಿ ಅಂಗೀಕರಿಸಲ್ಪಟ್ಟ ೧೪ನೇ ತಿದ್ದುಪಡಿಯನ್ನು ಮಾಜಿ ಕಾಂಫಿಡರೇಟರು ಕಾಂಗ್ರೆಸ್‌ಗೆ ಪ್ರವೇಶಿಸಿ ಅವರು ಈ ಹಿಂದೆ ಹೋರಾಡಿದ ಸರ್ಕಾರದಿಂದ ಅಧಿಕಾರ ಕಸಿದುಕೊಳ್ಳುವುದನ್ನು ತಡೆಯಲು ತರಲಾಯಿತು. ಚುನಾವಣಾ ವಂಚನೆಯ ಸಾಬೀತಾಗದ ಆರೋಪದ ಮೇಲೆ ಅಂದು ನೂತನ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಅಧಿಕಾರ ಹಸ್ತಾಂತರ ತಡೆಯಲೆತ್ನಿಸಿದ ಆರೋಪದ ಮೇಲೆ ರಿಪಬ್ಲಿಕನ್ ಟ್ರಂಪ್ ಅವರಿಗೆ ಅಂತರ್ಯುದ್ದೋತ್ತರ ತರ್ಕವು ಅನ್ವಯವಾಗುತ್ತಿರುವುದು ವಿಪರ್ಯಾಸವಾಗಿದೆ. ಕೊಲೊರಾಡೋ ಸುಪ್ರೀಂ ಕೋರ್ಟ್ ತೀರ್ಪು ಕೆಳಹಂತದ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿತು. ಅದು ೧೪ನೇ ತಿದ್ದುಪಡಿಯು ಅಧ್ಯಕ್ಷ ಸ್ಥಾನವನ್ನು ಒಳಗೊಂಡಿದೆಯೇ ಇಲ್ಲವೇ ಎಂಬುದು ಅಸ್ಪಷ್ಟವಾಗಿದೆ ಎಂದು ಟ್ರಂಪ್ ಸ್ಪರ್ಧಿಸುವುದನ್ನು ತಡೆಯಲು ನಿರಾಕರಿಸಿತ್ತು.

ಟ್ರಂಪ್ ಅವರು ಸಲ್ಲಿಸಲಿರುವ ಮೇಲ್ಮನವಿ ಯಶಸ್ವಿಯಾಗುತ್ತದೆಯೇ ಮತ್ತು ಕೊಲೊರಾಡೋದಲ್ಲಿ ಸ್ಪರ್ಧಿಸುವುದರಿಂದ ಅವರು ಅನರ್ಹಗೊಂಡಿರುವುದರಿಂದ ಮುಂದಿನ ವರ್ಷ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರ ಭವಿಷ್ಯ ಮಸುಕಾಗುತ್ತದೆಯೇ ಇಲ್ಲವೇ ಎಂಬುದರ ಹೊರತಾಗಿಯೂ, ಈ ತೀರ್ಪು ಟ್ರಂಪ್ ಅವರ ರಾಜಕೀಯ ನಿಲುವುಗಳ ಸುತ್ತ ಅಮೆರಿಕಾದ ಮತದಾರರನ್ನು ಧೃವೀಕರಣದತ್ತ ತಳ್ಳಲಿದೆ. ಒಂದೆಡೆ ಎಲ್ಲ ರಾಜಕೀಯ ಔಚಿತ್ಯವನ್ನು ತಿರಸ್ಕರಿಸಿ ಚುನಾವಣೆಯ ಸೋಲಿನ ನಂತರ ಅಧಿಕಾರ ತ್ಯಜಿಸಲು ನಿರಾಕರಿಸುವ ಹಂತಕ್ಕೆ ಹೋದ ಅಧ್ಯಕ್ಷರಿಂದ ಪ್ರಜಾಪ್ರಭುತ್ವಕ್ಕೆ ಒದಗಿದ ಅಪಾಯ, ಮತ್ತೊಂದೆಡೆ ಟ್ರಂಪ್ ರಾಜಕೀಯದ ದ್ವೇಷ ಭಾಷಣದೊಂದಿಗೆ ಸಂಯೋಜಿಸಿ ನೋಡಿದಾಗ ಇದು “ಮೇಕ್ ಅಮೆರಿಕಾ ಗ್ರೇಟ್ ಅಗೇನ್” (ಮಗಾ) ರಿಪಬ್ಲಿಕನ್ನರ ರಾಜಕೀಯ ದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ. ಇದು ಮುಖ್ಯವಾಹಿನಿಯ ಸಂಪ್ರದಾಯವಾದಿಗಳು ಮತ್ತು ಉದಾರವಾದಿಗಳಿಗೆ ಪ್ರಿಯವಾಗಿರುವ ಮೌಲ್ಯಗಳೊಂದಿಗೆ ಹೊಂದಾಣಿಕೆಯಾಗದ ಲೋಕದೃಷ್ಟಿಯಾಗಿದೆ. ಇದು ಮುಂದಿನ ದಿನಗಳಲ್ಲಿ ಪ್ರಜಾಸತ್ತಾತ್ಮಕ ಸಂವಾದ ಮುರಿದು ಬೀಳಲಿರುವ ಸೂಚನೆಯೇ ಸರಿ. ಇಂದು ಕೊರತೆ ಇರುವ ಉಭಯಪಕ್ಷೀಯ ಸಹಕಾರಕ್ಕಾಗಿ ಸೇತುವೆಗಳನ್ನು ನಿರ್ಮಿಸುವ ಬದಲು ಎಲ್ಲರೂ ಒಬ್ಬರನ್ನೊಬ್ಬರು ಎಲ್ಲೆಮೀರಿ ಟೀಕಿಸುತ್ತಾ ಸಂವಾದಕ್ಕೆ ಎಡೆಯಿಲ್ಲದಂತೆ ಮಾಡುತ್ತಿದ್ದಾರಷ್ಟೆ.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT