ADVERTISEMENT

ಒಡೆದ ಮನೆ 

Published - October 07, 2023 11:36 am IST

ಮೆಕಾರ್ಥಿಯನ್ನು ಪದಚ್ಯುತಗೊಳಿಸಿರುವುದು ರಿಪಬ್ಲಿಕನ್ ಪಕ್ಷದ ಆಳವಾದ ಬಿಕ್ಕಟ್ಟನ್ನು ಬಹಿರಂಗಪಡಿಸಿದೆ 

ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ಕೆವಿನ್ ಮೆಕಾರ್ಥಿ ಅವರನ್ನು ಕೆಳಮನೆಯ ಕಾಂಗ್ರೆಸ್‌ನ ಉನ್ನತ ಹುದ್ದೆಯಿಂದ ಆಶ್ಚರ್ಯಕರ ರೀತಿಯಲ್ಲಿ

ಪದಚ್ಯುತಗೊಳಿಸಿರುವುದು ಮತ್ತೊಮ್ಮೆ ರಿಪಬ್ಲಿಕನ್ ಪಕ್ಷ ಒಡೆದ ಮನೆ ಎಂಬುದನ್ನು ತೋರಿಸಿದೆ. ಫ್ಲೋರಿಡಾದಿಂದ ಕಾಂಗ್ರೆಸ್ಸಿಗೆ ಆಯ್ಕೆಯಾದ ಮ್ಯಾಟ್ ಗೇಟ್ಜ್ ಅವರು ಅತಿ ಅಪರೂಪವಾಗಿ ಬಳಸುವ “ಮೋಷನ್ ಟು ವೆಕೇಟ್” ಅನ್ನು ಬಳಸಿ ಅಮೇರಿಕಾದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಪೀಕರ್ ಮೆಕಾರ್ಥಿಯವರನ್ನು ಪದಚ್ಯುತಗೊಳಿಸಿದರು. ವ್ಯಂಗ್ಯವೆಂದರೆ ಈ ನಿಯಮವನ್ನು ಜಾರಿಗೆ ತಂದಿದ್ದು ಸ್ವತಃ ಮೆಕಾರ್ಥಿಯವರೇ. ೨೦೨೩ರ ಆರಂಭದಲ್ಲಿ ರಿಪಬ್ಲಿಕನ್ ಪಕ್ಷದೊಳಗಿನ ತಮ್ಮ ವೈರಿಗಳ ಬೆಂಬಲ ಪಡೆಯಲು ಮೆಕಾರ್ಥಿ ಈ ನಿಯಮದ ಭರವಸೆ ನೀಡಿದ್ದರು. ಈ ನಿರ್ಣಯದ ಮೇಲೆ ನಡೆದ ಮತದಾನದಲ್ಲಿ ಕ್ಯಾಲಿಫೋರ್ನಿಯಾದ ಶಾಸಕರಾದ ಮೆಕಾರ್ಥಿ ಅವರ ಪರ ೨೧೦ ಮತಗಳು ಬಿದ್ದರೆ, ಅವರ ವಿರುದ್ಧ ೨೧೬ ಮತಗಳು ಬಿದ್ದವು. ಎಂಟು ರಿಪಬ್ಲಿಕನ್‌ ಶಾಸಕರು ಸದನದಲ್ಲಿ ಬಹುಮತ ಇರುವ ಡೆಮಾಕ್ರಾಟರ ಪರ ಮತ ಚಲಾಯಿಸಿ ಮೆಕಾರ್ಥಿ ಅವರನ್ನು ಸೋಲಿಸಿದರು. ರಿಪಬ್ಲಿಕನ್ ಫ್ರೀಡಂ ಕಾಕಸ್‌ನ ಸದಸ್ಯರು ಮತ್ತು ಅವರ ಮಿತ್ರರು ಮೆಕಾರ್ಥಿಯವರ ಬಗ್ಗೆ ಅತಿ ಹೆಚ್ಚು ವಿರೋಧ ವ್ಯಕ್ತಪಡಿಸಿದ್ದಾರೆ. ಮೆಕಾರ್ಥಿ ಡೆಮಾಕ್ರಾಟರ ಜೊತೆ ನಿರ್ಣಾಯಕ ವಿಷಯಗಳಲ್ಲಿ ಸಹಕರಿಸಿದ್ದಾರೆ ಎಂದು ಅವರಿಗೆ ಅಸಮಾಧಾನ. ಇವುಗಳಲ್ಲಿ ಅತ್ಯಂತ ಮಹತ್ವಪೂರ್ಣವಾದದ್ದು ಸಾಲದ ಮಿತಿಯನ್ನು ಹೆಚ್ಚಿಸುವ ಮೂಲಕ ಫೆಡರಲ್ ಸರ್ಕಾರ ಸ್ಥಗಿತವಾಗುವುದನ್ನು ತಪ್ಪಿಸಲು ಉಭಯಪಕ್ಷೀಯ ಪ್ರಯತ್ನ. ಇದರ ಭಾಗವಾಗಿ ಮೆಕಾರ್ಥಿ ೪೫ ದಿನಗಳ ತಾತ್ಕಾಲಿಕ ಹಣಕಾಸು ಮಸೂದೆಗೆ ಸಹಿ ಹಾಕಿದರು. ಇದು ಸದನದಲ್ಲಿ ಅವರ ರಿಪಬ್ಲಿಕನ್ ವಿರೋಧಿಗಳ ಅಸಮಾಧಾನಕ್ಕೆ ಕಾರಣವಾಯಿತು.

ಇದರಲ್ಲಿ ರಿಪಬ್ಲಿಕನ್ ಪಕ್ಷವನ್ನು ಬಾಧಿಸುತ್ತಿರುವ ಆಳವಾದ ಬಿಕ್ಕಟ್ಟಿನ ಸೂಚನೆಯಿದೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ದೃಷ್ಟಿಕೋನದೊಂದಿಗೆ ಸಹಮತ ಇರುವ ಒಂದು ಗುಂಪು ಇನ್ನೂ ಸಕ್ರಿಯವಾಗಿದೆ. ಇದು ಸಾರ್ವಜನಿಕ ಖರ್ಚು ಕಡಿಮೆ ಮಾಡುವ ಸಣ್ಣ ಸಹಕಾರಕ್ಕಷ್ಟೆ ಒತ್ತಾಯಿಸುತ್ತಿಲ್ಲ. ಬದಲಿಗೆ ಅಮೇರಿಕಾದ ವಿದೇಶಾಂಗ ನೀತಿಯ ಮೇಲೂ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ. ಉದಾಹರಣೆಗೆ ರಷ್ಯಾದ ಆಕ್ರಮಣದ ವಿರುದ್ಧದ ಯುದ್ಧದ ಪ್ರಯತ್ನಗಳಲ್ಲಿ ಯುಕ್ರೇನಿಗೆ ಅಮೇರಿಕಾ ಸಹಾಯ ಕಡಿತ ಮಾಡಬೇಕು ಎಂದು ಕರೆ ನೀಡಿದೆ. “ಜಿಒಪಿ ರಾಡಿಕಲ್ಸ್” ಎಂದು ಕರೆಯಲ್ಪಡುವ ಈ ಗುಂಪು ಸರ್ಕಾರ ಸ್ಥಗಿತವಾಗುವಂತಹ ವಿಷಯಗಳಲ್ಲೂ ಯಾವುದೇ ರಾಜಿಗೆ ತಯಾರಿಲ್ಲ. ಈ ಗುಂಪನ್ನು ಸಮಾಧಾನಪಡಿಸಲು ಮೆಕಾರ್ಥಿಯವರು ಅಧ್ಯಕ್ಷ ಜೋ ಬೈಡೆನ್ ಅವರು ಯುಕ್ರೇನಿಗೆ ಬೆಂಬಲವಾಗಿ ನೀಡಬಯಸಿದ್ದ ೬ ಬಿಲಿಯನ್ ಡಾಲರ್ ಸಹಾಯದ ಪ್ಯಾಕೇಜಿಗೆ ಅಂಗೀಕಾರ ನಿರಾಕರಿಸಿದರು ಮತ್ತು ಅಧ್ಯಕ್ಷ ಬೈಡೆನ್ ಅವರ ಮಗ ಹಂಟರ್ ಬೈಡೆನ್ ಅವರ ಮೇಲೆ ಆರೋಪಗಳನ್ನು ಹೊರಿಸಿ ಅಧ್ಯಕ್ಷರನ್ನು ಪದಚ್ಯುತಗೊಳಿಸಲು ಪ್ರಯತ್ನಿಸಿ ಸೋತರು. ಆದರೆ ಚುನಾವಣಾ ವರ್ಷದಲ್ಲಿ ಈ ಗುಂಪಿನ ರಾಜಕೀಯವು ಇಡೀ ಪಕ್ಷಕ್ಕೆ ರಾಜಕೀಯವಾಗಿ ದುಬಾರಿಯಾಗಬಹುದು. ಸಾಧಾರಣವಾಗಿ ನಿಷ್ಪಕ್ಷಪಾತ ಮತದಾರರು ಒಗ್ಗಟ್ಟು ಪ್ರದರ್ಶಿಸದ ಪಕ್ಷದ ವಿರುದ್ಧ ಮತ ಚಲಾಯಿಸುತ್ತಾರೆ.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT