ADVERTISEMENT

ಸ್ಪೂರ್ತಿದಾಯಕ ಬಣ್ಣಗಳು

October 06, 2023 11:46 am | Updated 11:46 am IST

‘ಕೃತಕ ಪರಮಾಣು’ಗಳನ್ನು ಸಂಶ್ಲೇಷಿಸಿದ ಮೂವರಿಗೆ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ದೊರೆತಿದೆ.

ಬಸ್ಸು ಕಿಕ್ಕಿರಿದಿಲ್ಲದೇ ಇದ್ದು, ಕಿಟಕಿ ಪಕ್ಕದ ಸೀಟು ಸಿಕ್ಕು, ತಂಪಾದ ಗಾಳಿ ಬೀಸುತ್ತಿದ್ದರೆ ಪ್ರಯಾಣ ಆನಂದ ನೀಡುತ್ತದೆ. ಆದರೆ ಬಸ್ಸು ಜನರಿಂದ ತುಂಬಿ ತುಳುಕುತ್ತಿದ್ದು, ನಿಲ್ಲಲೇ ಜಾಗ ಇಲ್ಲದಿದ್ದರೆ ಯಾರಾದರೂ ಸಿಡುಕಬಹುದು. ಪರಮಾಣುಗಳೂ ಹೀಗೆ. ಅವು ಕಡಿಮೆ ಸಾಂದ್ರತೆಯ ಒಂದು ಪಾತ್ರೆಯಲ್ಲಿ ಒಂದು ರೀತಿ ವರ್ತಿಸಿದರೆ, ಅವುಗಳನ್ನು ದಟ್ಟವಾಗಿ ಹೆಚ್ಚು ಸಾಂದ್ರತೆಯಿರುವಂತೆ ಅವುಗಳಿಗೆ ಚಲಿಸಲು ಜಾಗವೇ ಇಲ್ಲದಂತೆ ಒಟ್ಟಿಗೆ ಪೇರಿಸಿಟ್ಟರೆ ಮತ್ತೊಂದು ರೀತಿ ವರ್ತಿಸುತ್ತವೆ. ಈ ಪರಿಸ್ಥಿತಿಯಲ್ಲಿ ಅವು ಹೇಗೆ ವರ್ತಿಸುತ್ತವೆ ಎಂಬುದನ್ನು ಕಂಡುಹಿಡಿದ ಮೂವರಿಗೆ ೨೦೨೩ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ತಾಂತ್ರಿಕವಾಗಿ ಹೇಳುವುದಾದರೆ ಕ್ವಾಂಟಮ್ ಚುಕ್ಕೆಗಳನ್ನು (ಕ್ವಾಂಟಂ ಡಾಟ್ಸ್) ಪತ್ತೆಹಚ್ಚಿ ಅವುಗಳನ್ನು ಪ್ರಯೋಗಾಲಯದಲ್ಲಿ ಸಂಶ್ಲೇಷಿಸಿದ್ದಕ್ಕಾಗಿ ಈ ಮೂವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಕ್ವಾಂಟಮ್ ಚುಕ್ಕೆಗಳು ಕೆಲವೇ ಕೆಲವು ನ್ಯಾನೊಮೀಟರ್ ಅಗಲವಿರುವ ಹರಳುಗಳೆನ್ನಬಹುದು. ಪ್ರತಿ ಕ್ವಾಂಟಮ್ ಚುಕ್ಕೆಯಲ್ಲಿ ಕೆಲವೇ ಸಾವಿರ ಪರಮಾಣುಗಳಿರುತ್ತವೆ. (ಒಂದು ಹನಿ ನೀರಿನಲ್ಲಿ ಅಂದಾಜು ಒಂದು ಸೆಕ್ಸ್ಟಿಲಿಯನ್, ಅಂದರೆ ಒಂದರ ಪಕ್ಕ ೨೧ ಸೊನ್ನೆಗಳಷ್ಟು ಪರಮಾಣುಗಳಿರುತ್ತವೆ). ಕ್ವಾಂಟಮ್ ಚುಕ್ಕೆಯಲ್ಲಿ ಪರಮಾಣುಗಳು ದಟ್ಟವಾಗಿರುವುದರಿಂದ ಅವುಗಳ ಎಲೆಕ್ಟ್ರಾನ್‌ಗಳು ಪರಸ್ಪರ ಹತ್ತಿರದಲ್ಲಿರುತ್ತವೆ. ಈ ಪರಿಸರದಲ್ಲಿ ಕ್ವಾಂಟಮ್ ಮೆಕ್ಯಾನಿಕ್ಸ್‌ನ ನಿಯಮಗಳು ಕ್ವಾಂಟಮ್ ಚುಕ್ಕೆಗಳ ನಡವಳಿಕೆಯನ್ನು ವಿವರಿಸುತ್ತದೆ, ಎಷ್ಟರಮಟ್ಟಿಗೆ ಅಂದರೆ ಒಂದಿಡೀ ಕ್ವಾಂಟಮ್ ಚುಕ್ಕೆಯು ಒಂದು ಪರಮಾಣುವಿನಂತೆಯೇ ವರ್ತಿಸುತ್ತದೆ. ಇದಲ್ಲದೆ ಈ ಚುಕ್ಕೆಗಳ ಮತ್ತೊಂದು ವರ್ತನೆ ಇವುಗಳ ಪ್ರಸಿದ್ಧಿಗೆ ಮುಖ್ಯ ಕಾರಣ. ನೀವು ಈ ಚುಕ್ಕೆಗಳ ಮೇಲೆ ಸ್ವಲ್ಪ ಬೆಳಕು ಹಾಯಿಸಿದರೆ ಅದನ್ನು ಅವು ಹೀರಿಕೊಂಡು, ಗಾತ್ರವನ್ನು ಅವಲಂಬಿಸಿ ವಿಭಿನ್ನ ಆವರ್ತನದಲ್ಲಿ (ಫ್ರೀಕ್ವೆನ್ಸಿ) ಅಥವಾ ಬೇರೆ ಬಣ್ಣದ ಬೆಳಕನ್ನು ಹೊರಸೂಸುತ್ತವೆ. ಉದಾಹರಣೆಗೆ, ಸಣ್ಣ ಕ್ವಾಂಟಮ್ ಚುಕ್ಕೆಗಳು ಹೆಚ್ಚಿನ ಆವರ್ತನದ ನೀಲಿ ಬಣ್ಣದ ಬೆಳಕನ್ನು ಹೊರಸೂಸುತ್ತವೆ. ಅಂದರೆ ಒಂದೇ ವಸ್ತುವಿನಿಂದ ಮಾಡಿದ ಎರಡು ಕ್ವಾಂಟಮ್ ಚುಕ್ಕೆಗಳು ಅದರ ಗಾತ್ರದ ಆಧಾರದ ಮೇಲೆ ಬೇರೆ ರೀತಿ ವರ್ತಿಸುತ್ತವೆ. ಈ ಕಾರಣಗಳಿಗಾಗಿ, ಕ್ವಾಂಟಮ್ ಚುಕ್ಕೆಗಳಿಗೆ ಟ್ರಾನ್ಸಿಸ್ಟರ್‌ಗಳು, ಲೇಸರ್‌ಗಳು, ವೈದ್ಯಕೀಯ ಕ್ಷೇತ್ರ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಅನೇಕ ಪ್ರಯೋಜನಗಳಿವೆ. ೧೯೮೧ ರಲ್ಲಿ ಅಂದಿನ ಸೋವಿಯತ್ ಒಕ್ಕೂಟದಲ್ಲಿ ಕೆಲಸ ಮಾಡುತ್ತಿದ್ದ ಅಲೆಕ್ಸಿ ಎಕಿಮೊವ್ ಅವರು ಮೊದಲು ಗಾಜಿನೊಳಗೆ ‘ಹೆಪ್ಪುಗಟ್ಟಿದ’ ಕ್ವಾಂಟಮ್ ಚುಕ್ಕೆಗಳನ್ನು ಸಂಶ್ಲೇಷಿಸಿದರು. ಎರಡು ವರ್ಷಗಳ ನಂತರ, ಲೂಯಿಸ್ ಬ್ರುಸ್ ಅಮೆರಿಕಾದಲ್ಲಿ ಒಂದು ದ್ರಾವಣದಲ್ಲಿ ಕ್ವಾಂಟಮ್ ಚುಕ್ಕೆಗಳನ್ನು ಸಂಶ್ಲೇಷಿಸಿದರು ಮತ್ತು ಅವುಗಳ ಕ್ವಾಂಟಮ್-ಭೌತಿಕ ಗುಣಲಕ್ಷಣಗಳ ಅಧ್ಯಯನ ಮಾಡಿದರು. ಅಂತಿಮವಾಗಿ, ಡಾ. ಬ್ರುಸ್ ಅವರ ವಿದ್ಯಾರ್ಥಿಯಾಗಿ ಕ್ವಾಂಟಮ್ ಚುಕ್ಕೆಗಳ ಮೇಲೆ ಕೆಲಸ ಪ್ರಾರಂಭಿಸಿದ ಮೌಂಗಿ ಬಾವೆಂಡಿ ೧೯೯೩ರಲ್ಲಿ ಉತ್ತಮ ಗುಣಮಟ್ಟದ ಕ್ವಾಂಟಮ್ ಚುಕ್ಕೆಗಳನ್ನು ಸುಲಭ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ ಸಂಶ್ಲೇಷಿಸುವ ಮಾರ್ಗ ಕಂಡುಹಿಡಿದರು. ಅವರ ಕೊಡುಗೆಗಳಿಗಾಗಿ ಈ ಮೂವರೂ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಹಲವು ಚಿತ್ತಾಕರ್ಷಕ ವೈಜ್ಞಾನಿಕ ಆವಿಷ್ಕಾರಗಳು, ಅವುಗಳ ಎಲ್ಲಾ ತಾಂತ್ರಿಕ ಅತ್ಯಾಧುನಿಕತೆಯ ಹೊರತಾಗಿ, ನಿರುಪದ್ರವಿಯಾಗಿರುತ್ತವೆ. ಕ್ವಾಂಟಮ್ ಚುಕ್ಕೆಗಳು ಅಂತಹವುಗಳಲ್ಲಿ ಒಂದು. ಅವುಗಳ ವರ್ತನೆಯನ್ನು ಅರಿಯಲು ಕ್ವಾಂಟಮ್ ಮೆಕ್ಯಾನಿಕ್ಸ್‌ನ ಜ್ಞಾನದ ಅಗತ್ಯವಿದೆ, ಆದರೆ ಕ್ವಾಂಟಮ್ ಮೆಕ್ಯಾನಿಕ್ಸ್ ಅವುಗಳ ನಡವಳಿಕೆಯನ್ನು ನಿರ್ದೇಶಿಸುವುದಿಲ್ಲ. ಡಾ. ಎಕಿಮೊವ್ ಸ್ವತಃ ಬಣ್ಣದ ಗಾಜಿನ ವೈವಿಧ್ಯಮಯ ಬಣ್ಣಗಳೇ ತಮಗೆ ಈ ಬಗ್ಗೆ ಕೆಲಸ ಮಾಡಲು ಸ್ಫೂರ್ತಿ ನೀಡಿದವು ಎಂದು ಹೇಳಿದ್ದಾರೆ. ಕ್ವಾಂಟಮ್ ಚುಕ್ಕೆಗಳು ಇಂದು ಎಲ್ಇಡಿ ಪರದೆಗಳನ್ನು ಬೆಳಗುತ್ತಿವೆ ಮತ್ತು ದೇಹದಲ್ಲಿ ತೆಗೆದುಹಾಕಬೇಕಾದ ಗೆಡ್ಡೆಯನ್ನು ತೋರುತ್ತದೆ. ಆದರೆ ಕೆಂಪು, ಹಸಿರು, ನೀಲಿ - ಹೀಗೆ ವೈವಿಧ್ಯಮಯ ಬಣ್ಣಗಳನ್ನು ನಾವು ಮರೆಯಬಾರದು. ಇದು ಮತ್ತಷ್ಟು ಆವಿಷ್ಕಾರಗಳಿಗೆ ಸ್ಫೂರ್ತಿ ನೀಡಬಹುದು.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT