ADVERTISEMENT

ಹೆಚ್ಚು ವೇಗ, ಹೆಚ್ಚು ಬಲ

May 30, 2023 09:33 am | Updated 09:33 am IST

ಭಾರತವು ತನ್ನ ಸೂಪರ್ ಕಂಪ್ಯೂಟರ್‌ಗಳನ್ನು ಹವಾಮಾನ ಮುನ್ಸೂಚನೆಗಳಿಗಲ್ಲದೆ ಇತರೆ ಕ್ಷೇತ್ರಗಳಲ್ಲೂ ಬಳಸಬೇಕು

ಬರುವ ತಿಂಗಳುಗಳಲ್ಲಿ ಭಾರತ ಹೊಸ ಸೂಪರ್‌ ಕಂಪ್ಯೂಟರ್ ಅಥವಾ ನವೀಕರಿಸಿದ ಉನ್ನತ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ (ಎಚ್.ಪಿ.ಸಿ.) ವ್ಯವಸ್ಥೆಯನ್ನು ಹೊಂದಲಿದ್ದು, ಇದು ದೇಶದ ಅತ್ಯಂತ ವೇಗದ ಸೂಪರ್‌ ಕಂಪ್ಯೂಟರ್ ಆಗಿರಲಿದೆ. ಇದನ್ನು ಫ್ರೆಂಚ್ ಮಾಹಿತಿ ತಂತ್ರಜ್ಞಾನ ಕಂಪನಿ ಅಟೋಸ್ ಸ್ಥಾಪಿಸಲಿದೆ. ಡಿಸೆಂಬರ್ ೨೦೧೮ರಲ್ಲಿ ನರೇಂದ್ರ ಮೋದಿ ಸರ್ಕಾರವು ೨೦೨೫ರ ವೇಳೆಗೆ ₹೪೫೦೦ ಕೋತಿ ಮೌಲ್ಯದ ಸೂಪರ್‌ ಕಂಪ್ಯೂಟರುಗಳನ್ನು ಖರೀದಿಸಲು ಫ್ರಾನ್ಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಯಂತ್ರಗಳನ್ನು ಸದ್ಯ ಭಾರತದ ಅತ್ಯುತ್ತಮ ಸೂಪರ್‌ ಕಂಪ್ಯೂಟರುಗಳಾದ ಮಿಹಿರ್ ಮತ್ತು ಪ್ರತ್ಯುಷ್ ಇರುವ ಪುಣೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿರಿಯಾಲಜಿ ಮತ್ತು ನೋಯ್ಡಾದ ನ್ಯಾಷನಲ್ ಸೆಂಟರ್ ಫಾರ್ ಮೀಡಿಯಂ ರೇಂಜ್‌ ವೆದರ್ ಫೋರ್ಕ್ಯಾಸ್ಟಿಂಗಗಳಲ್ಲಿ ಸ್ಥಾಪಿಸಲಾಗುತ್ತದೆ. ಇದರ ಪೂರ್ವವರ್ತಿಯಾಗಿ ಅಟೋಸ್ ಯಂತ್ರಗಳನ್ನು ಪ್ರಾಥಮಿಕವಾಗಿ ಅತ್ಯಾಧುನಿಕ ಹವಾಮಾನ ಮಾದರಿಗಳನ್ನು ಸೃಷ್ಟಿಸಲು ಬಳಸಲಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ದೀರ್ಘಾವಧಿಯ ಮುಂಗಾರಿನಿಂದ ಹದಿನೈದು ದಿನಗಳವರೆಗಿನ ಮತ್ತು ದೈನಂದಿನ ಹವಾಮಾನ ಬದಲಾವಣೆಗಳವರೆಗೆ ಮುನ್ಸೂಚನೆಗಳನ್ನು ನೀಡಲು ಈ ಯಂತ್ರಗಳನ್ನು ಬಳಸಲಾಗುತ್ತಿದೆ. ನಿಖರವಾದ ಮುನ್ಸೂಚನೆಗಳನ್ನು ನೀಡಲು ವಾತಾವರಣ ಮತ್ತು ಸಾಗರಗಳ ಸ್ಥಿತಿಯನ್ನು ಮರುಸೃಷ್ಟಿಸುವುದು ಅಗತ್ಯವಾಗಿರುವುದರಿಂದ ಇದಕ್ಕೆ ಅತ್ಯಂತ ಶಕ್ತಿಶಾಲಿ ಯಂತ್ರಗಳು ಬೇಕಾಗುತ್ತವೆ. ‘ಸೂಪರ್‌ ಕಂಪ್ಯೂಟರ್‌ಗಳು’ ಎಂಬುದು ನಿರಂತರ ಹರಿವಿನಲ್ಲಿರುವ ಒಂದು ಪದ. ಎರಡು ದಶಕಗಳ ಹಿಂದಿನ ಸೂಪರ್‌ ಕಂಪ್ಯೂಟರ್‌ಗಳು ಇಂದಿನ ವಿದ್ಯಾರ್ಥಿಗಳ ಲ್ಯಾಪ್‌ಟಾಪ್‌ಗಳು ಮತ್ತು ಗೇಮಿಂಗ್ ಕನ್ಸೋಲುಗಳಾಗಿವೆ.

ಹವಾಮಾನ ಮುನ್ಸೂಚನೆಯ ಹೊರತಾಗಿ ಅನೇಕ ಸವಾಲಿನ ಸಂಶೋಧನಾ ಕ್ಷೇತ್ರಗಳಾದ ಪ್ರೋಟೀನ್ ಬಯಾಲಜಿ, ಏರೋಸ್ಪೇಸ್-ಮಾಡೆಲಿಂಗ್ ಮತ್ತು ಈಗ ಕೃತಕ ಬುದ್ಧಿಮತ್ತೆಗಳು ಕಂಪ್ಯೂಟಿಂಗ್ ಮೇಲೆ ಹೆಚ್ಚು ಅವಲಂಬಿತವಾಗಿವೆ. ಇದಲ್ಲದೆ ದೇಶಗಳು ಇವುಗಳನ್ನು ತಮ್ಮ ತಾಂತ್ರಿಕ ಪರಾಕ್ರಮವನ್ನು ಸಾರಲು ಪದಕಗಳಂತೆ ಪ್ರದರ್ಶನ ಮಾಡುತ್ತವೆ. ಟಾಪ್೫೦೦ ಯೋಜನೆಯು ಕಳೆದ ಎರಡು ದಶಕಗಳಿಂದ ವಿಶ್ವದ ೫೦೦ ಶಕ್ತಿಶಾಲಿ ಸೂಪರ್‌ ಕಂಪ್ಯೂಟರುಗಳ ಪಟ್ಟಿ ಮಾಡುತ್ತದೆ ಮತ್ತು ಇದನ್ನು ವರ್ಷಕ್ಕೆ ಎರಡು ಬಾರಿ ನವೀಕರಿಸಲಾಗುತ್ತದೆ. ಪ್ರಸ್ತುತ ನಮ್ಮ ದೇಶದ ಪುಣೆಯ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್ (ಸಿಡಿಎಸಿ) ನಲ್ಲಿರುವ ಯಂತ್ರವು ಮಾತ್ರ ಟಾಪ್ ೧೦೦ರ ಪಟ್ಟಿಯಲ್ಲಿದೆ. ಇದು ೧೩ ಪೆಟಾಫ್ಲಾಪ್‌ಗಳ ಉನ್ನತ ವೇಗವನ್ನು ಹೊಂದಿರುವ ಏಕೈಕ ಭಾರತೀಯ ಯಂತ್ರವಾಗಿದೆ. ಫ್ಲಾಪ್ಸ್ ಎಂದರೆ ಪ್ರತಿ ಸೆಕೆಂಡಿಗೆ ಎಷ್ಟು ಫ್ಲೋಟಿಂಗ್ ಪಾಯಿಂಟ್ ಕಾರ್ಯಾಚರಣೆಗಳನ್ನು ಮಾಡಬಹುದು ಎಂಬುದರ ಲೆಕ್ಕ ಮತ್ತು ಇದು ಕಂಪ್ಯೂಟರಿನ ಸಂಸ್ಕರಣಾ ಸಾಮರ್ಥ್ಯದ ಸೂಚಕವಾಗಿದೆ. ಒಂದು ಪೆಟಾಫ್ಲಾಪ್‌ ಎಂದರೆ ೧೦೦೦ ಟ್ರಿಲಿಯನ್ ಫ್ಲಾಪ್ ಆಗಿದೆ. ಈಗ ಸ್ಥಾಪಿಸಲಾಗುವ ಫ್ರೆಂಚ್ ಯಂತ್ರಗಳು ೧೮ ಪೆಟಾಫ್ಲಾಪ್‌ ಸಾಮರ್ಥ್ಯದ್ದಾಗಿರಬಹುದೆಂದು ನಿರೀಕ್ಷಿಸಲಾಗಿದೆ. ಭಾರತವು ಈಗಾಗಲೇ ಪೆಟಾಫ್ಲಾಪ್ ಶ್ರೇಣಿಯ ಬೆರಳೆಣಿಕೆಯಷ್ಟು ಯಂತ್ರಗಳನ್ನು ಹೊಂದಿದೆ. ಈ ಯಂತ್ರಗಳು ಲಭ್ಯವಿರುವುದು ನಮ್ಮ ವಿಜ್ಞಾನಿಗಳಿಗೆ ಉತ್ತಮ ಸೌಕರ್ಯ ಎಂಬುದು ಸತ್ಯ. ಆದರೆ ಈ ಯಂತ್ರಗಳ ಬಳಕೆಯು ಮೂಲಭೂತ ವಿಜ್ಞಾನ ಅಥವಾ ಎಂಜಿನಿಯರಿಂಗ್ ವಾಣಿಜ್ಯ ಉತ್ಪನ್ನಗಳಲ್ಲಿ ಗಮನಾರ್ಹ ಪ್ರಗತಿಗೆ ಕಾರಣವಾಗಿದೆಯೇ ಎಂಬುದು ಪ್ರಶ್ನಾರ್ಹವಾಗಿದೆ. ಈ ಯಂತ್ರಗಳ ಕಾರಣವಾಗಿ ಕಳೆದ ಕೆಲವು ವರ್ಷಗಳಲ್ಲಿ ಅಲ್ಪಾವಧಿಯ ಹವಾಮಾನ ಮುನ್ಸೂಚನೆಗಳನ್ನಷ್ಟೇ ಅಲ್ಲದೆ ಚಂಡಮಾರುತಗಳ ಮುನ್ಸೂಚನೆಗಳು ಹೆಚ್ಚು ನಿಖರವಾಗಿವೆ ನಿಜ. ಆದರೆ ಇದರಿಂದ ತೃಪ್ತರಾಗುವ ಬದಲು ಇತರ ಕ್ಷೇತ್ರಗಳಲ್ಲೂ ಈ ಯಂತ್ರಗಳ ಪ್ರಯೋಜನ ಪಡೆಯುವಂತಾಗಬೇಕು.  

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT