ADVERTISEMENT

ಕಿರಿಯ ಆಟಗಾರರ ಪಡೆ

May 27, 2023 09:40 am | Updated 09:40 am IST

ನಡಾಲ್ ಇಲ್ಲದ ರೋಲ್ಯಾಂಡ್-ಗ್ಯಾರೋಸ್‌ನಲ್ಲಿ ಯಾವುದೇ ಸ್ಪಷ್ಟ ನೆಚ್ಚಿನ ಆಟಗಾರರಿಲ್ಲ

ಸುಮಾರು ಎರಡು ದಶಕಗಳಿಂದ ರೋಲ್ಯಾಂಡ್-ಗ್ಯಾರೋಸ್‌ನಲ್ಲಿ ರಾಫೆಲ್ ನಡಾಲ್ ಹೊರತುಪಡಿಸಿ ಬೇರೆಯವರು ಗೆದ್ದದ್ದು ಅಪರೂಪದಲ್ಲಿ ಅಪರೂಪ. ೨೦೦೫ರಲ್ಲಿ ಪಾದಾರ್ಪಣೆ ಮಾಡಿದ ನಂತರ ದಂತಕಥೆಯೇ ಆದ ಈ ಸ್ಪೇನ್ ಆಟಗಾರ ಈ ಟೂರ್ನಿಯನ್ನು ೧೪ ಬಾರಿ ಗೆದ್ದಿದ್ದಾನೆ. ಈತ ೧೧೫ ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಸೋತಿದ್ದಾನೆ. ಈತನ ಬಿಗಿ ಹಿಡಿತದ ವಿರುದ್ಧ ಆಗಾಗ ನೊವಾಕ್ ಜೊಕೊವಿಚ್ ನಿಂದ ಸವಾಲು ಎದುರಾಗಿದೆ. ಆದರೆ ಇವುಗಳ ಸದ್ದನ್ನೂ ನಡಾಲ್ ಅಡಗಿದ್ದಾನೆ. ಪ್ಯಾರಿಸ್ಸಿನ ಜೇಡಿಮಣ್ಣಿನ ಕೋರ್ಟಿನಲ್ಲಿ ಸರ್ಬಿಯಾದ ಆಟಗಾರ ಜೊಕೊವಿಚ್ ವಿರುದ್ಧ ನಡಾಲ್ ೮-೨ ಮುನ್ನಡೆ ಸಾಧಿಸಿದ. ಆದರೆ ಫ್ರೆಂಚ್ ಓಪನ್ ೨೦೨೩ ರಿಂದ ಹೊಸತನ್ನು ನಿರೀಕ್ಷಿಸಬಹುದು. ಏಕೆಂದರೆ ೨೦೦೪ರ ನಂತರ ಇದೇ ಮೊದಲ ಬಾರಿಗೆ ನಡಾಲ್ ಈ ಬಾರಿಯ ಟೂರ್ನಿಯಿಂದ ಹೊರಗುಳಿದಿದ್ದಾನೆ. ತನ್ನ ಸೊಂಟದ ನೋವಿನ ಕಾರಣವಾಗಿ ಜನವರಿಯಿಂದ ಎಲ್ಲ ಕ್ರೀಡಾಕೂಟಗಳಿಂದ ಹೊರಗುಳಿದಿದ್ದಾನೆ. ಪುರುಷರ ಟೆನಿಸ್ ಆಟದ ವ್ಯವಸ್ಥೆಯಲ್ಲಿ ಒಟ್ಟಾರೆ ಹಲವು ಬದಲಾವಣೆಗಳಾಗುವ ಲಕ್ಷಣಗಳಿವೆ. ರೋಜರ್ ಫೆಡರರ್ ನಿವೃತ್ತಿ ಹೊಂದಿದ್ದು, ರಾಫೆಲ್ ನಡಾಲ್ ಹೊರಗುಳಿದಿದ್ದು, ನೊವಾಕ್ ಜೊಕೊವಿಚ್ ಸದ್ಯ ಉತ್ತಮ ಆಟ ಆಡದೆ ಇರುವುದರಿಂದ ಪ್ರಮುಖ ಮೂರು ಆಟಗಾರರ ಹಿಡಿತ ದುರ್ಬಲವಾಗಿದೆ. ಎರಡು ಬಾರಿ ಚಾಂಪಿಯನ್ ಆಗಿರುವ, ೨೨ ಪ್ರಮುಖ ಪಂದ್ಯಾವಳಿಗಳಲ್ಲಿ ಗೆದ್ದು ನಡಾಲ್ ಜೊತೆ ಸಮ ಆಗಿರುವ ತನ್ನ ದಾಖಲೆಯನ್ನು ಉತ್ತಮಗೊಳಿಸುವ ಇರಾದೆ ಜೊಕೊವಿಚ್ ಗೆ ಇರುತ್ತದೆ. ಆದರೆ ಬಾರ್ಸಿಲೋನಾ ಮತ್ತು ಮ್ಯಾಡ್ರಿಡ್‌ನಲ್ಲಿ ನಡೆದ ಫ್ರೆಂಚ್ ಓಪನ್ ಪೂರ್ವಭಾವಿ ಪಂದ್ಯಾವಳಿಗಳಲ್ಲಿ ವಿಜೇತ ಮತ್ತು ಸದ್ಯ ವಿಶ್ವದ ನಂಬರ್-೧ ಆಟಗಾರ ಕಾರ್ಲೋಸ್ ಅಲ್ಕರಾಜ್ ಈ ಪಂದ್ಯಾವಳಿಯ ಕೇಂದ್ರಬಿಂದು ಆಗುವ ಸಾಧ್ಯತೆ ಇದೆ. ೨೦- ವರ್ಷ ವಯಸ್ಸಿನ ಕಾರ್ಲೋಸ್ ಅಲ್ಕರಾಜ್ ಈಗಾಗಲೇ ೨೦೨೨ರ ಯುಎಸ್-ಓಪನ್ ಗೆದ್ದಿದ್ದು ಈಗ ಈ ಪಂದ್ಯಾವಳಿ ಗೆದ್ದರ ಅದು ಮುಡಿಗೆ ಮತ್ತೊಂದು ಗರಿಯಷ್ಟೆ.

ಆತನಿಗೆ ಸವಾಲೆಸೆಯುವುದು ಸ್ಕ್ಯಾಂಡಿನೇವಿಯಾದ ಜೋಡಿ - ೨೦೨೨ರ ಪಂದ್ಯದಲ್ಲಿ ನಡಾಲ್‌ಗೆ ಸೋತ ನಂಬರ್ ೪ ಆಟಗಾರ ಕ್ಯಾಸ್ಪರ್ ರೂಡ್‌ ಮತ್ತು ಇತ್ತೀಚೆಗೆ ಮಾಂಟೆ ಕಾರ್ಲೋ ಮತ್ತು ರೋಮ್‌ನಲ್ಲಿ ಫೈನಲ್ಸಿನವರೆಗೂ ಬಂದ ನಂಬರ್ ೬ ಆಟಗಾರ ಹೋಲ್ಗರ್ ರೂನ್. ಡೇನಿಯಲ್ ಮೆಡ್ವೆಡೆವ್ ಕಳೆದ ವಾರ ರೋಮ್‌ನಲ್ಲಿ ತನ್ನ ಯಶಸ್ಸಿನ ನಂತರ ಕೆಮ್ಮಣ್ಣಿನ ಕೋರ್ಟಿನ ಬಗ್ಗೆ ಹೊಸ ಪ್ರೀತಿ ಮೂಡಿಸಿಕೊಂಡಿದ್ದಾನೆ. ಆದರೆ ರಷ್ಯಾದ ನಂಬರ್ ೨ ಆಟಗಾರ ಹೆಚ್ಚೆಂದರೆ ಒಂದು ವೈಲ್ಡ್ ಕಾರ್ಡ್ ಅಷ್ಟೆ. ಆತನ ಜೊತೆ ಸ್ಟೆಫಾನೋಸ್ ಸಿಟ್ಸಿಪಾಸ್, ಆಂಡ್ರೆ ರುಬ್ಲೆವ್, ಜಾನಿಕ್ ಸಿನ್ನರ್ ಮತ್ತು ಅಲೆಕ್ಸಾಂಡರ್ ಜ್ವೆರೆವ್ ಸಹ ಇದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಮತ್ತು ಈ ಹಿಂದಿನಂತಲ್ಲದೆ, ಮಹಿಳಾ ಟೆನಿಸ್ ವಲಯದಲ್ಲಿ ಎಲ್ಲವೂ ಬಹುತೇಕ ಪೂರ್ವನಿರ್ಧಾರಿತದಂತೆ ಕಾಣುತ್ತಿದೆ. ಇಗಾ ಸ್ವಿಯಾಟೆಕ್, ಅರೀನಾ ಸಬಲೆಂಕಾ ಮತ್ತು ಎಲೆನಾ ರೈಬಾಕಿನಾ ಮೂರು ಅತಿ ಪ್ರಬಲ ಆಟಗಾರ್ತಿಯರಾಗಿದ್ದಾರೆ. ಅವರು ಸ್ಟಟ್‌ಗಾರ್ಟ್, ಮ್ಯಾಡ್ರಿಡ್ ಮತ್ತು ರೋಮ್‌ನಲ್ಲಿ ಕಳೆದ ನಾಲ್ಕು ಪ್ರಮುಖ ಪಂದ್ಯಾವಳಿಗಳು ಮತ್ತು ರೋಲ್ಯಾಂಡ್-ಗ್ಯಾರೋಸ್ ಪೂರ್ವಸಿದ್ಧತಾ ಪಂದ್ಯಾವಳಿಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಪ್ಯಾರಿಸ್‌ನಲ್ಲಿ ಎರಡು ಬಾರಿ ವಿಜೇತೆ ಮತ್ತು ಮೂರು ಬಾರಿ ಮೇಜರ್ ಚಾಂಪಿಯನ್ ಆಗಿರುವ ಸ್ವಿಯಾಟೆಕ್ ವಿಶ್ವದ ನಂಬರ್ ೧ ಮಹಿಳಾ ಟೆನಿಸ್ ಆಟಗಾರ್ತಿಯಿರಬಹುದು. ಆದರೆ ಮೂರು ಸಮಾನ ಪ್ರತಿಭೆಗಳಲ್ಲಿ ಆಕೆ ಮೊದಲಿಗಳು ಅಷ್ಟೆ. ೨೦೨೨ರ ವಿಂಬಲ್ಡನ್ ಮತ್ತು ಯುಎಸ್ ಓಪನ್‌ನಲ್ಲಿ ರನ್ನರ್-ಅಪ್ ಆಗಿದ್ದ ಟುನೀಸಿಯಾದ ಓನ್ಸ್ ಜಬೇರ್ ಕಾಲಿನ ಗಾಯ ಆಗಿ ಆಟದಿಂದ ಹೊರಗುಳಿದು ಇತ್ತೀಚೆಗಷ್ಟೆ ಮರಳಿ ಬಂದಿದ್ದಾಳೆ. ಆದರೆ ಕಳೆದ ವರ್ಷ ಮ್ಯಾಡ್ರಿಡ್‌ನಲ್ಲಿ ಮತ್ತು ಏಪ್ರಿಲ್ ಆರಂಭದಲ್ಲಿ ಚಾರ್ಲ್ಸ್‌ಟನ್‌ನಲ್ಲಿ ವಿಜಯಗಳು ಈಕೆ ನಿಜವಾದ ಸ್ಪರ್ಧಿ ಎಂದು ಸಾಬೀತುಪಡಿಸುತ್ತವೆ. ೨೦೨೧ರ ಸಿಂಗಲ್ಸ್ ಮತ್ತು ಡಬಲ್ಸ್ ಚಾಂಪಿಯನ್ ಆಗಿರುವ ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜ್ಸಿಕೋವಾ ಕೂಡ ಗಟ್ಟಿ ಸ್ಪರ್ಧೆ ಒಡ್ಡಲಿದ್ದಾಳೆ. ಇದೆಲ್ಲವೂ ಈ ಬಾರಿ ಮಹಿಳಾ ಟೆನಿಸ್ಸಿನಲ್ಲಿ ಸ್ಪಷ್ಟ ನೆಚ್ಚಿನ ಆಟಗಾರರಿಲ್ಲ ಎಂದು ಸೂಚಿಸುತ್ತದೆ. ಆದರೆ ಅನಿರೀಕ್ಷಿತಗಳೂ ಇದ್ದಂತಿಲ್ಲ.

This is a Premium article available exclusively to our subscribers. To read 250+ such premium articles every month
You have exhausted your free article limit.
Please support quality journalism.
You have exhausted your free article limit.
Please support quality journalism.
The Hindu operates by its editorial values to provide you quality journalism.
This is your last free article.

ADVERTISEMENT

ADVERTISEMENT