ಆಸ್ಟ್ರೇಲಿಯಾ ವಿರುದ್ಧದ ಇತ್ತೀಚಿನ ನಾಲ್ಕು ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಅವರ ತಂಡವು ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ೨-೧ ಅಂತರದೊಂದಿಗೆ ಉಳಿಸಿಕೊಂಡ ನಂತರ ತವರು ನೆಲದಲ್ಲಿ ಭಾರತ ಅಜೇಯವೆನಿಸಿದೆ. ಆದರೆ ಈ ಪಂದ್ಯಾವಳಿಯಲ್ಲಿ ಗೆಲ್ಲುವುದಕ್ಕಿಂತಲೂ ಜೂನ್ ೭ ರಂದು ಲಂಡನ್‌ನ ಓವಲ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಸ್ಥಾನ ಪಡೆಯುವ ಕಡೆ ಭಾರತ ತಂಡದ ದೃಷ್ಟಿ ನೆಟ್ಟಿತ್ತು. ಎರಡು ಟೆಸ್ಟ್‌ಗಳ ಗೆಲುವಿನ ಸ್ಪಷ್ಟ ಮುನ್ನಡೆ ಭಾರತಕ್ಕೆ ಅಗತ್ಯವಾಗಿತ್ತು. ಆದರೂ ಆಸೀಸ್ ಇಂದೋರ್‌ನಲ್ಲಿ ಗೆದ್ದು ಅದರ ಹಿನ್ನಡೆಯನ್ನು ತಗ್ಗಿಸಿತು. ಅಹಮದಾಬಾದಿನ ಪಿಚ್ ರನ್ಗಳ ಸುರಿಮಳೆಯೊಂದಿಗೆ ಪಂದ್ಯ ಡ್ರಾ ಆಗುವುದರತ್ತ ಸರಿಯುವುದನ್ನು ಮೊದಲೇ ಸೂಚಿಸಿತ್ತು. ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಈಗಾಗಲೇ ಸ್ಥಾನ ಸಂಪಾದಿಸಿದ್ದು, ಮತ್ತೊಂದು ಸ್ಥಾನಕ್ಕೆ ಭಾರತ ಮತ್ತು ಶ್ರೀಲಂಕಾ ನಡುವೆ ಪೈಪೋಟಿ ಏರ್ಪಟ್ಟಿತ್ತು. ಭಾರತದ ಅದೃಷ್ಟಕ್ಕೆ ಕೇನ್ ವಿಲಿಯಮ್ಸನ್ ಅವರ ಶ್ರೇಷ್ಠ ಆಟದ ಕಾರಣ ನ್ಯೂಜಿಲೆಂಡ್ ಕ್ರೈಸ್ಟ್‌ಚರ್ಚ್‌ನಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿತು. ಶ್ರೀಲಂಕಾದ ಸೋಲು ಭಾರತಕ್ಕೆ ವರದಾನವಾಗಿ ಪರಿಣಮಿಸಿದೆ. ಇದು ಅಹ್ಮದಾಬಾದಿನ ಪಂದ್ಯ ಡ್ರಾನತ್ತ ಸಾಗಿದಾಗಲೂ ಭಾರತ ಡಬ್ಲ್ಯುಟಿಸಿ ಫೈನಲ್ಗೆ ಪ್ರವೇಶ ಪಡೆಯಲು ಸಹಾಯ ಮಾಡಿತು. ಸೌತಾಂಪ್ಟನ್‌ನಲ್ಲಿ ೨೦೨೧ರ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ನಂತರ, ಈ ಬಾರಿ ಭಾರತ ತಂಡವು ಮೊದಲು ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆದು ನಂತರ ಮುಂಬೈನ ಬಿಸಿಸಿಐ ಕಚೇರಿಯ ಕಪಾಟಿನಲ್ಲಿ ಐಸಿಸಿ ಪ್ರಶಸ್ತಿಗಳ ಬರವನ್ನು ನೀಗಿಸುವ ಗುರಿ ಹೊಂದಿತ್ತು. ಭಾರತವು ಕಳೆದ ಬಾರಿ ಐಸಿಸಿ ಪಂದ್ಯಾವಳಿಯನ್ನು ಗೆದ್ದದ್ದು ೨೦೧೩ರಲ್ಲಿ. ಅದರ ನಂತರ ಟೆಸ್ಟ್ ಮತ್ತು ಏಕದಿನ ಪಂದ್ಯಾವಳಿಗಳಲ್ಲೂ ಭಾರತ ನಾಕೌಟ್ ಸುತ್ತುಗಳಲ್ಲಿಯೇ ವಿಫಲವಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ವಿಜಯವು ಭಾರತವನ್ನು ಉತ್ತಮ ಸ್ಥಾನದಲ್ಲಿರಿಸಿದೆ ನಿಜ. ಆದರೆ ಡಬ್ಲ್ಯುಟಿಸಿಯ ಸಮ್ಮಿಟ್ ಪಂದ್ಯಗಳಲ್ಲಿ ತಂಡಗಳು ತಟಸ್ಥ ಸ್ಥಳದಲ್ಲಿ ಮುಖಾಮುಖಿಯಾದಾಗ ಸ್ಪಿನ್ಗಾಗಿ ವಿನ್ಯಾಸಗೊಂಡ ಪಿಚ್‌ಗಳು ಇರುವುದಿಲ್ಲ. ಮೊದಲ ಬಾಲ್‌ನಿಂದ ಪಿಚ್ ಹದಗೆಡುತ್ತಾ ಸಾಗಿ ಮೂರು ದಿನಗಳೊಳಗೆ ಪಂದ್ಯ ಮುಕ್ತಾಯಗೊಳ್ಳುವ ಟೆಸ್ಟ್‌ಗಳು ಕ್ರಿಕೆಟ್‌ನ ಸುದೀರ್ಘ ಸ್ವರೂಪಕ್ಕೆ ಉತ್ತಮವಲ್ಲ. ಐದು ದಿನಗಳ ಆಟದೊಂದಿಗೆ ಅಹಮದಾಬಾದ್ ಪಂದ್ಯ ಒಂದು ಅಪವಾದವಾಗುಳಿಯಿತು. ಆದರೆ ಭಾರತ ವಿದೇಶ ಪ್ರವಾಸ ಮಾಡುವಾಗ ವೇಗದ ಬೌಲಿಂಗ್ ಮುಖ್ಯವಾಗುತ್ತದೆ, ಸ್ಪಿನ್ ಅಲ್ಲ. ತಂಡದ ಮುಖ್ಯ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವುದು ಒಂದು ಚಿಂತೆಯ ವಿಷಯವಾಗಿದೆ. ಉಮೇಶ್ ಯಾದವ್ ಜೊತೆಗೆ ಶಮಿ ಮೊಹಮ್ಮದ್ ಮತ್ತು ಸಿರಾಜ್ ಮೊಹಮ್ಮದ್ ತಮ್ಮ ವೇಗದ ದಾಳಿಯನ್ನು ಇನ್ನಷ್ಟು ಮೊನಚು ಮಾಡಬೇಕಿದೆ. ರೋಹಿತ್, ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಅವರು ಆಸ್ಟ್ರೇಲಿಯಾ ವಿರುದ್ಧದ ಇತ್ತೀಚಿನ ಸರಣಿಯಲ್ಲಿ ರನ್‌ಗಳ ಸುರಿಮಳೆಗರೆದರು. ಶುಭಮನ್ ಗಿಲ್ ಉತ್ತಮ ಆಟ ಪ್ರದರ್ಶಿಸಿದರು. ಹಾಗಾಗಿ ಇವರೆಲ್ಲರೂ ಓವಲ್‌ನಲ್ಲಿ ಭಾರತದ ಕೈಹಿಡಿಯಲಿದ್ದಾರೆ ಎಂಬ ಭರವಸೆ ಇದೆ. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಹಲವು ವಿಕೆಟ್‌ಗಳನ್ನು ಕಿತ್ತರು. ಆದರೆ ಭಾರತವು ಡಬ್ಲ್ಯುಟಿಸಿ ಫೈನಲ್‌ನಲ್ಲಿ ಇಬ್ಬರನ್ನೂ ಆಡಿಸುತ್ತದೆಯೋ ಇಲ್ಲ ಒಬ್ಬರನ್ನು ಆಯ್ಕೆ ಮಾಡುತ್ತದೋ ಕಾದು ನೋಡಬೇಕಿದೆ. ರೋಹಿತ್, ಕೊಹ್ಲಿ, ಪೂಜಾರ, ಅಶ್ವಿನ್ ಮತ್ತು ಜಡೇಜಾ ಸೇರಿದಂತೆ ಮುಖ್ಯ ಆಟಗಾರರೆಲ್ಲರೂ ಮೂವತ್ತೈದರ ಆಸುಪಾಸಿನಲ್ಲಿದ್ದು ಮುಂದಿನ ತಲೆಮಾರು ಬರುವುದು ಅನಿವಾರ್ಯ. ಆದರೆ ಅದಕ್ಕೂ ಮೊದಲು ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಓಡಿಐ ಸರಣಿಯ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ ಇದೆ. ಭಾರತ ತಂಡವು ಜೂನ್‌ನಲ್ಲಿ ಇಂಗ್ಲೆಂಡ್‌ಗೆ ಹೊರಡಲಿದೆ.
This editorial has been translated from English, which can be read here.
COMMents
SHARE