ಎರಡು ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ಮತದಾರರು ಪ್ರತಿಪಕ್ಷಗಳು ಕರೆ ನೀಡಿದ್ದ ಬದಲಾವಣೆಯನ್ನು ತಿರಸ್ಕರಿಸಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಿಗೆ ಮತ್ತೊಂದು ಅವಕಾಶ ನೀಡಿದ್ದಾರೆ. ಈ ಫಲಿತಾಂಶ ಬಿಜೆಪಿಯ ನಿರಂತರ ಕೆಲಸಕ್ಕೆ ಸಿಕ್ಕ ಪ್ರತಿಫಲವಾಗಿದೆ. ಈ ಫಲಿತಾಂಶ ತಾನು ಅತ್ಯಂತ ಶಕ್ತ ರಾಷ್ಟ್ರೀಯ ಪಕ್ಷ ಎಂಬ ಬಿಜೆಪಿಯ ಪ್ರತಿಪಾದನೆಗೆ ಬಲ ತುಂಬುತ್ತದೆ. ತ್ರಿಪುರಾದಲ್ಲಿ ಬಿಜೆಪಿ ಮತ್ತು ಅದರ ಪ್ರಾದೇಶಿಕ ಮಿತ್ರಪಕ್ಷ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ ೩೩ ಸ್ಥಾನಗಳನ್ನು ಗೆದ್ದಿದೆ. ಇದು ಈ ಮೈತ್ರಿಕೂಟವು ೨೦೧೮ರಲ್ಲಿ ಗೆದ್ದದ್ದಕ್ಕಿಂತ ಒಂಬತ್ತು ಸ್ಥಾನಗಳು ಕಡಿಮೆ ಆದರೂ ಸರಳ ಬಹುಮತಕ್ಕಿಂತ ಎರಡು ಸ್ಥಾನಗಳು ಹೆಚ್ಚು. ಎಡರಂಗ ಮತ್ತು ಕಾಂಗ್ರೆಸ್ ಮೈತ್ರಿಯು ಎಡಪಕ್ಷಗಳಿಗೆ ಹೊಡೆತ ನೀಡಿತಾದರೂ ಕಾಂಗ್ರೆಸ್ಸಿಗೆ ಹೊಸ ಜೀವ ನೀಡಿತು. ಎಡರಂಗವು ೨೦೧೮ ರಲ್ಲಿ ಗೆದ್ದ ೧೬ ಕ್ಕಿಂತ ಐದು ಕಡಿಮೆ ಸ್ಥಾನಗಳನ್ನು ಗೆದ್ದಿದ್ದರೆ, ಕಳೆದ ಚುನವಣೆಯಲ್ಲಿ ಒಂದೂ ಸ್ಥಾನ ಗೆಲ್ಲದಿದ್ದ ಕಾಂಗ್ರೆಸ್ ಈ ಬಾರಿ ಮೂರು ಸ್ಥಾನಗಳನ್ನು ಗೆದ್ದಿದೆ. ಹೊಸ ಪಕ್ಷವಾದ ತಿಪ್ರಾ ಮೋಥಾ ಬುಡಕಟ್ಟು ಪ್ರದೇಶಗಳಲ್ಲಿ ಸ್ಪರ್ಧಿಸಿದ ೪೨ ಸ್ಥಾನಗಳಲ್ಲಿ ೧೩ ಸ್ಥಾನಗಳನ್ನು ಗೆದ್ದಿದೆ. ಸುಧಾರಿತ ಕಾನೂನು ಸುವ್ಯವಸ್ಥೆ, ಬಡವರಿಗೆ ಮಾಸಿಕ ₹೨೦೦೦ ಸಾಮಾಜಿಕ ಭತ್ಯೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ೧.೬ ಲಕ್ಷ ಮನೆಗಳನ್ನು ಒದಗಿಸುವಂತಹ ಕಲ್ಯಾಣ ಕಾರ್ಯಕ್ರಮಗಳು ಬಿಜಿಪಿಯ ವಿಜಯಕ್ಕೆ ಕಾರಣವೆಂದು ಹೇಳಬಹುದು. ಬುಡಕಟ್ಟು ಪಕ್ಷವಾದ ತಿಪ್ರಾ ಮೋಥಾದ ಉದಯದಿಂದ ವಿಚಲಿತರಾದಂತಿರುವ ಬುಡಕಟ್ಟುಗಳೇತರ ಮತದಾರರನ್ನು ಒಟ್ಟುಗೂಡಿಸುವಲ್ಲಿ ಬಿಜೆಪಿ ಸಫಲವಾಗಿದೆ.
ಮೇಘಾಲಯದಲ್ಲಿ, ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್.ಪಿ.ಪಿ) ವಿರುದ್ದ ಮಿತ್ರ ಪಕ್ಷಗಳು ಮತ್ತು ವಿರೋಧ ಪಕ್ಷಗಳು ಮಾಡಿದ ಭ್ರಷ್ಟಾಚಾರ ಆರೋಪಗಳು ಅದರ ವಿರುದ್ಧ ಕೆಲಸ ಮಾಡಲಿಲ್ಲ. ಎನ್.ಪಿ.ಪಿ ೨೦೧೮ ರಲ್ಲಿ ಗೆದ್ದದ್ದಕ್ಕಿಂತ ಆರು ಸ್ಥಾನಗಳು ಹೆಚ್ಚು, ಅಂದರೆ ೨೬ ಸ್ಥಾನಗಳನ್ನು ಗೆದ್ದುಕೊಂಡಿದೆ. ಹೊರಹೋಗುತ್ತಿರುವ ಸರ್ಕಾರದಲ್ಲಿ ಅದರ ಮಿತ್ರಪಕ್ಷಗಳಾದ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ ಮತ್ತು ಬಿಜೆಪಿಗಳು ಸ್ವತಂತ್ರ್ಯವಾಗಿ ಚುನಾವಣೆ ಎದುರಿಸಿ ಕ್ರಮವಾಗಿ ೧೧ ಮತ್ತು ಎರಡು ಸ್ಥಾನಗಳನ್ನು ಗೆದ್ದಿವೆ. ಗಾರೊ ಮತ್ತು ಖಾಸಿ-ಜೈನ್ತಿಯಾ ಸಮುದಾಯಗಳ ಪ್ರಾಬಲ್ಯವಿರುವ ಎರಡೂ ಗುಡ್ಡಗಾಡು ಪ್ರದೇಶಗಳೂ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಬೆಂಬಲ ಇರುವುದು ಎನ್.ಪಿ.ಪಿಗೆ ಸಹಾಯವಾಗಿದೆ. ತೃಣಮೂಲ ಕಾಂಗ್ರೆಸ್ ಪಕ್ಷವು ಮೇಘಾಲಯದಲ್ಲಿ ನೆಲೆ ಕಂಡುಕೊಳ್ಳಲು ನಡೆಸಿದ ಪ್ರಯತ್ನವು ವಿಫಲವಾಯಿತು. ಅದು ಬಂಗಾಳಿ ಪಕ್ಷ ಎಂದು ಜನ ಎಣಿಸಿದ್ದು ಅದಕ್ಕೆ ಮುಳುವಾಯಿತು. ಈ ಹಿಂದೆ ರಾಜ್ಯಾದ್ಯಂತ ಬೆಂಬಲ ಹೊಂದಿದ್ದ ಕಾಂಗ್ರೆಸ್ ಈಗ ತನ್ನ ಗತದ ಪೇಲವ ನೆರಳಾಗಿದೆ. ೨೦೧೮ರ ೨೧ ಸ್ಥಾನಗಳ ಬಲದಿಂದ ಅದು ೫ ಸ್ಥಾನಗಳಿಗೆ ಕುಸಿದಿದೆ. ಮೇಘಾಲಯದ ಕ್ರಿಶ್ಚಿಯನ್ ಸಮುದಾಯವು ಬಿಜಿಪಿಯ ಬಗ್ಗೆ ಇನ್ನೂ ಗುಮಾನಿ ಇಟ್ಟುಕೊಂಡಿದೆ. ಆದರೆ ನಾಗಾಲ್ಯಾಂಡ್‌ನಲ್ಲಿ ಕ್ರಿಶ್ಚಿಯನ್ನರು ಬಿಜೆಪಿಗೆ ಬೆಂಬಲಿಸಿದ್ದಾರೆ. ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ಮತ್ತು ಬಿಜೆಪಿ ಮೈತ್ರಿಕೂಟವು ನಾಗಾಲ್ಯಾಂಡ್‌ನಲ್ಲಿ ಅಧಿಕಾರವನ್ನು ಉಳಿಸಿಕೊಂಡಿದೆ. ಇಲ್ಲಿನ ವಿಧಾನಸಭೆಯಲ್ಲಿ ಪ್ರತಿಪಕ್ಷವೆ ಇಲ್ಲ. ಬಿಜೆಪಿ ೨೦೧೮ರಲ್ಲಿ ಗೆದ್ದಷ್ಟೆ ೧೨ ಸ್ಥಾನಗಳನ್ನು ಗೆದ್ದರೆ ಎನ್‌ಡಿಪಿಪಿ ಏಳು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಬಲವನ್ನು ೨೫ ಕ್ಕೆ ವೃದ್ಧಿಸಿಕೊಂಡಿದೆ. ೬೦ ಸದಸ್ಯ ಬಲದ ವಿಧಾನಸಭೆಯಲ್ಲಿ ಉಳಿದ ಸ್ಥಾನಗಳನ್ನು ಬಿಜಿಪಿಯ ಸಣ್ಣ ಮಿತ್ರಪಕ್ಷಗಳು ಗೆದ್ದುಕೊಂಡಿವೆ. ಇದು ಈ ವಿಧಾನಸಭೆಯಲ್ಲೂ ಕೂಡಾ ಯಾವುದೇ ಪ್ರತಿಪಕ್ಷದ ಸಾಧ್ಯತೆಯನ್ನು ತಳ್ಳಿಹಾಕಿದೆ.
This editorial has been translated from English, which can be read here.
COMMents
SHARE