ಒಳ್ಳೆಯದು ಮತ್ತು ಕೆಟ್ಟದ್ದು

ಕೃತಕ ಬುದ್ಧಿಮತ್ತೆಯ (ಎಐ) ದುಷ್ಪರಿಣಾಮಗಳಿಗೆ ಬೆನ್ನು ಒಡ್ಡದೆ ಅದರ ಉಪಯೋಗಗಳನ್ನು ಭಾರತ ಪಡೆದುಕೊಳ್ಳಬೇಕಿದೆ

June 03, 2023 10:52 am | Updated 02:17 pm IST

ಉತ್ಪಾದಕ ಕೃತಕ ಬುದ್ಧಿಮತ್ತೆ ಹೊಸ ದತ್ತಾಂಶಗಳನ್ನು ಸೃಷ್ಟಿಸುವ ಎಐ ಆಗಿದೆ. ಇಂದು ಜಗತ್ತಿನಲ್ಲಿ ಉತ್ಪಾದಕ ಎಐಗಳ ಹಲವು ಉದಾಹರಣೆಗಳಿವೆ. ಅವುಗಳ ಸಾಮಾನ್ಯ ಬಳಕೆಯೆಂದರೆ ಪಠ್ಯ, ಚಿತ್ರಗಳನ್ನು ರಚಿಸುವುದು, ಬಳಕೆದಾರರ ಮನವಿಗೆ ಪ್ರತಿಕ್ರಿಯೆಯಾಗಿ ಕಂಪ್ಯೂಟರ್ ಕೋಡ್ಅನ್ನು ಬರೆಯುವುದು ಇತ್ಯಾದಿ. ಅವುಗಳ ವಿಶಾಲವಾದ ಅಳವಡಿಕೆ ಅವುಗಳ ಸಾಧ್ಯತೆಗಳನ್ನು ಆಕರ್ಷಣೀಯಗೊಳಿಸಿದ್ದು, ಚಿಂತಾಕ್ರಾಂತಗೊಳಿಸುವುದಕ್ಕಿಂತ ಅಚ್ಚರಿಗೆ ದೂಕಿದೆ. ‘ಓಪನ್‌ಎಐ’ನ ಚಾಟ್‌ಜಿಪಿಟಿ ಎಂಬ ಚಾಟ್‌ಬಾಟ್ ಬುದ್ಧಿಮತ್ತೆಯನ್ನು ಬಹಳ ಚೆನ್ನಾಗಿ ಅನುಕರಿಸುತ್ತದೆ. ಇಂದು ಹೆಚ್ಚುಕಡಿಮೆ ಅದು ಉತ್ಪಾದಕ ಎಐನ ಸಾಮರ್ಥ್ಯಗಳಿಗೆ ಸಮಾನಾರ್ಥಕವೆಂಬಂತೆ ಬೆಳೆದಿದೆ. ಕಳೆದ ಕೆಲವು ವರ್ಷಗಳಿಂದ,  ದೊಡ್ಡಮಟ್ಟದ ದತ್ತಾಂಶಗಳ ಮೇಲೆ ತರಬೇತುಗೊಳಿಸಿ, ನ್ಯೂರಲ್ ನೆಟ್‌ವರ್ಕ್‌ಗಳ ಸಹಾಯದಿಂದ ಸಿದ್ಧಪಡಿಸಿರುವ ಎಐ ಮಾದರಿಗಳಿಗೆ, ಅಗತ್ಯ ಮಟ್ಟದ ಕಂಪ್ಯೂಟಿಂಗ್ ಶಕ್ತಿ ದೊರಕಿದ್ದು, ಅವುಗಳನ್ನು ಒಳ್ಳೆಯದಕ್ಕೆ ಬಳಸಲಾಗಿದೆ; ಉದಾಹರಣೆಗೆ ಹೊಸ ರೋಗನಿರೋಧಕಗಳನ್ನು ಮತ್ತು ಅಲಾಯ್‌ಗನ್ನು ಕಂಡುಹಿಡಿಯಲು, ಹಲವು ಬುದ್ಧಿವಂತ ಮನರಂಜನಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತು ಕೆಲವು ದಿನನಿತ್ಯದ ಸಾಮಾನ್ಯ ಕೆಲಸಗಳನ್ನು ಮಾಡಲು ಬಳಸಲಾಗುತ್ತಿದೆ, ಆದರೆ ದತ್ತಾಂಶಗಳನ್ನು ಬದಲಾಯಿಸುವ ಸಾಮರ್ಥ್ಯಕ್ಕೆ ಗಣನೀಯವಾಗಿ ಇದು ಹೆಚ್ಚು ಗಮನ ಸೆಳೆದಿದೆ. ವಾಸ್ತವವನ್ನು ಪ್ರತಿಫಲಿಸುವ ದತ್ತಾಂಶ ಮತ್ತು ಎಐ ಬಳಸಿದ ಅನುಕರಣಾ ಬಾಟ್‌ಗಳು ವಾಸ್ತವ ಎಂಬಂತೆ ಚಿತ್ರಿಸುವ ದತ್ತಾಂಶದ ನಡುವೆ ವ್ಯತ್ಯಾಸವನ್ನು ವಿಶ್ವಾಸಾರ್ಹವಾಗಿ ಕಂಡುಕೊಳ್ಳಲು ಜಗತ್ತು ಈಗಾಗಲೇ ಸನ್ನದ್ಧಕೊಂಡಿದೆ. ಇದು ಮತ್ತು ಇತರ ಬೆಳೆವಣಿಗೆಗಳಿಂದ ಎಐನ ಮೊದಲಿಗರ ಬಹುಮುಖ್ಯ ಗುಂಪಿಗೆ, ಎಚ್ಚರಿಕೆ ಅನ್ನುವಂತಹ ಒಂದು ಸಾಲಿನ ಪಠ್ಯವನ್ನು, ಹೇಳಿಕೆಯನ್ನು ಸಿದ್ಧಪಡಿಸಲು ಸಾಧ್ಯವಾಗಿದೆ: “ಸಾಂಕ್ರಾಮಿಕಗಳು ಮತ್ತು ಅಣುಯುದ್ಧದಂತಹ ಸಾಮಾಜಿಕ ನೆಲೆಯ ಅಪಾಯಗಳ ಜೊತೆಜೊತೆಗೆ ಎಐನಿಂದ ನಿರ್ಮೂಲನೆಯಾಗುವ ಅಪಾಯವನ್ನು ನಿವಾರಿಸಿಕೊಳ್ಳುವುದು ಜಾಗತಿಕ ಆದ್ಯತೆಯಾಗಬೇಕಿದೆ.” ಎಐನ ಲಾಭಪಡೆಯುವ ಅಪ್ರಾಮಾಣಿಕ ಪಾತ್ರಗಳು ಅದನ್ನು ಕೆಟ್ಟದ್ದಕ್ಕೆ ಬಳಸುವುದು ಹಲವು ಬೆದರಿಕೆಗಳಲ್ಲಿ ಒಂದಾಗಿದ್ದರೆ, ಮಾನವ ಸಮಾಜದ ಸಂಕೀರ್ಣತೆಯನ್ನು ಒಪ್ಪಿಕೊಳ್ಳಲು ಈ ಹೇಳಿಕೆ ತುಂಬಾ ಸರಳ ಸೂಚಿಯಾಗಿದೆ.

ಕೆಲವು ಸಾರ್ವಜನಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸಲಾದ ಕೆಲವು ನಿರ್ದಿಷ್ಟ ಕಳವಳಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದರಿಂದ ಮುಂದೆ ಸಹಾಯವಾದೀತು, ಆದಾಗ್ಯೂ: ಎಐ ಮಾದರಿಗಳು ಕೆಲಸ ಮಾಡುವ ಬಗೆಗಿನ ನಿಗೂಢತೆ, ಹಕ್ಕುಸ್ವಾಮ್ಯದ ದತ್ತಾಂಶವನ್ನು ಅವುಗಳು ಬಳಸುವುದು, ಮಾನವನ ಘನತೆ ಮತ್ತು ಖಾಸಗಿತನದ ಬಗ್ಗೆ ಅವುಗಳ ಧೋರಣೆ, ದತ್ತಾಂಶಗಳನ್ನು ಬದಲಾಯಿಸುವುದರಿಂದ ರಕ್ಷಣೆ ಮುಖ್ಯ ಸಂಗತಿಗಳಾದಾವು. ಇಂದು ಅಭಿವೃದ್ಧಿಪಡಿಸಲಾಗುತ್ತಿರುವ ಮಾದರಿಗಳು ಈ ಅಪಾಯಗಳನ್ನು ಹೇಗೆ ನಿರ್ವಹಿಸುತ್ತವೆ ಎಂಬುದಕ್ಕೆ ಟಿಕ್ ಮಾಡಬೇಕಿರುವುದನ್ನು ಕಡ್ಡಾಯಗೊಳಿಸಿಲ್ಲ ಮತ್ತು ಅವು ಒಡ್ಡುವ ಅಪಾಯದ ಬಗ್ಗೆ ಸರಿಯಾದ ತಿಳಿವಳಿಕೆಯೂ ಇನ್ನೂ ಸಾಧ್ಯವಾಗಿಲ್ಲ. ಎಐ ಮಾದರಿಗಳು ಕಾರ್ಯನಿರ್ವಹಿಸಲು ಬೇಕಾಗಿರುವ ಕಂಪ್ಯೂಟಿಂಗ್ ಸಂಪನ್ಮೂಲಗಳು, ಈಗ ಲಭ್ಯವಿರುವ ಗ್ರಾಹಕ ಇಲೆಕ್ಟ್ರಾನಿಕ್ಸ್ ಜೊತೆಗೆ ಸಂಪೂರ್ಣವಾಗಿ ವ್ಯಾಪಿಸುತ್ತಿರುವಾಗ, ಕನಿಷ್ಟ ಪಕ್ಷ ಅಪಾಯಕಾರಿ ಸಂಸ್ಥೆಗಳಿಗೆ ಬ್ರೇಕ್ ಹಾಕಲು ಸಾಧ್ಯವಿರುವಂತೆ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಉಳಿಸಿಕೊಳ್ಳುವ ನೀತಿಗಳನ್ನು ಜಗತ್ತು ಹೊಂದಿರಬೇಕಾಗುತ್ತದೆ. ಈ ಸಂದರ್ಭರಲ್ಲಿ, ಭಾರತ ಸರ್ಕಾರ ತಾನೇ ಮುಂಜಾಗರೂಕನಾಗಿ ಮುಕ್ತ ವಲಯದ ಎಐನ ಅಪಾಯದ ಬಗೆಗಿನ ಚಿತ್ರಣ ನೀಡುವ ಅಂಶಗಳನ್ನು ತಿಳಿಸುವಂತಹ ಯೋಜನೆಯನ್ನು ಸ್ಥಾಪಿಸಿ ನಿರ್ವಹಿಸಬೇಕು, ಮುಂದೆ ಅತಿ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಬಲ್ಲ ಎಐ ಮಾದರಿಗಳನ್ನು ಪರೀಕ್ಷಿಸುವಂತಹ ಸಂಶೋಧನಾ ಮತ್ತು ಅಬಿವೃದ್ಧಿ ಪರಿಸರವನ್ನು ಸೃಷ್ಟಿಸಬೇಕು, ಸುಲಭವಾಗಿ ಅರ್ಥ ಮಾಡಿಸಬಲ್ಲ ಎಐ ಅಭಿವೃದ್ಧಿಯನ್ನು ಪ್ರೋತ್ಸಾಹಿಸಬೇಕು, ಹಸ್ತಕ್ಷೇಪ ಬೇಕಾಗಿರುವ ಸಂದರ್ಭಗಳನ್ನು ವ್ಯಾಖ್ಯಾನಿಸಬೇಕು ಮತ್ತು ಈ ಎಲ್ಲದರಲ್ಲೂ ಹದ್ದಿನ ಕಣ್ಣಿಡಬೇಕು. ನಿಷ್ಕ್ರಿಯತೆ ಈಗ ಆಯ್ಕೆಯಾಗಿ ಉಳಿದಿಲ್ಲ: ದುಷ್ಪರಿಣಾಮಗಳ ಸಾಧ್ಯತೆಯ ಹೊರತಾಗಿಯೂ, ಎಐ ಸಾಧ್ಯತೆಗಳ ಒಳ್ಳೆಯ ಸಂಗತಿಗಳನ್ನು ಭಾರತ ಕಳೆದುಕೊಳ್ಳುವಂತೆ ಮಾಡಿಬಿಡಬಹುದು. 

Top News Today

Sign in to unlock member-only benefits!
  • Access 10 free stories every month
  • Save stories to read later
  • Access to comment on every story
  • Sign-up/manage your newsletter subscriptions with a single click
  • Get notified by email for early access to discounts & offers on our products
Sign in

Comments

Comments have to be in English, and in full sentences. They cannot be abusive or personal. Please abide by our community guidelines for posting your comments.

We have migrated to a new commenting platform. If you are already a registered user of The Hindu and logged in, you may continue to engage with our articles. If you do not have an account please register and login to post comments. Users can access their older comments by logging into their accounts on Vuukle.